Publish Date: Sat, 27 Oct 2018 (18:29 IST)
Updated Date: Sat, 27 Oct 2018 (18:31 IST)
ಆ್ಯಂಬುಲೆನ್ಸ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಕುಂದಾಪುರದ ಕೋಟ ಮಣೂರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಮೃತರು ಹಾಗೂ ಗಾಯಾಳುಗಳು ಉತ್ತರ ಕನ್ನಡ ಜಿಲ್ಲೆಯ ಮೂಲದವರು ಎಂದು ಗುರುತಿಸಲಾಗಿದೆ. ಕಾರವಾರದ ಉಲ್ಲಾಸ ತಳೇಕರ್, ಅವರ ಸಂಬಂಧಿಕರಾದ ಅಶೋಕ್ ಎಂಬುವರು ಮೃತರಲ್ಲಿ ಸೇರಿದ್ದಾರೆ.
ಹೃದ್ರೋಗಿಯಾಗಿದ್ದ ಉಲ್ಲಾಸ್ ತಳೇಕರ್ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕರೆತರುತ್ತಿದ್ದಾಗ ಲಾರಿ ಹಾಗೂ ಆ್ಯಂಬುಲೆನ್ಸ್ ನಡುವೆ ಢಿಕ್ಕಿ ಸಂಭವಿಸಿ ದುರ್ಘಟನೆ ನಡೆದಿದೆ.