Select Your Language

Notifications

webdunia
webdunia
webdunia
webdunia

ಪತ್ನಿ ಊರಿಗೆ ಹೋಗುತ್ತಿದ್ದವ ಮಸಣ ಸೇರಿದ!

ಅಪಘಾತ
ಕೊಪ್ಪಳ , ಸೋಮವಾರ, 15 ಅಕ್ಟೋಬರ್ 2018 (12:30 IST)
ತನ್ನ ಪತ್ನಿಯ ಊರಿಗೆಂದು ತೆರಳುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ.

ವಿಜಯಪುರದಿಂದ ಹೊಸಪೇಟೆ ಮಾರ್ಗ ನಡುವೆ ಹೊಸುರು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವ್ಯಕ್ತಿಯೊವ೯ ಸಾವನ್ನಪ್ಪಿದ ಘಟನೆ ನಡೆದಿದೆ. ಈಶಪ್ಪ ನಾಗಪ್ಪ ಕರಕಿಹಳ್ಳಿ (35) ಸಾವೀಗಿಡಾದ ವ್ಯಕ್ತಿಯಾಗಿದ್ದಾನೆ.

ಪಾದಾಚಾರಿ ಈಶಪ್ಪ ತನ್ನ ಹೆಂಡತಿ ಊರಿಗೆಂದು ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದ ನಡೆದ  ಘಟನೆ ಇದಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ.  
ನಾಲ್ಕು ಹೆಣ್ಣುಮಕ್ಕಳಿರುವ ಈಶಪ್ಪನ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.  

ಮೃತ ದೇಹವನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಾಲಮನ್ನಾಗೂ ಅಭಿವೃದ್ಧಿಗೂ ಸಂಬಂಧವಿಲ್ಲ ಎಂದ ಸಿಎಂ