Select Your Language

Notifications

webdunia
webdunia
webdunia
webdunia

ಗಾಯಾಳುಗಳನ್ನು ಭೇಟಿ ಮಾಡಿದ ಸಾರಿಗೆ ಸಚಿವ

ಗಾಯಾಳುಗಳನ್ನು ಭೇಟಿ ಮಾಡಿದ ಸಾರಿಗೆ ಸಚಿವ
ಮಂಡ್ಯ , ಬುಧವಾರ, 3 ಅಕ್ಟೋಬರ್ 2018 (18:19 IST)
ಮಂಡ್ಯ ನಗರದ ಗುತ್ತಲು ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಸಾರಿಗೆ ಸಚಿವ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು.

ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮೃತರ ಅಂತಿಮ ದರ್ಶನ ಪಡೆದು, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆಯಬಾರದಿತ್ತು. ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಹಾಗೂ ಎಲ್ಲಾ ಗಾಯಾಳುಗಳ ಚಿಕಿತ್ಸೆಗೆ ಎರಡು ಲಕ್ಷ ಪರಿಹಾರವನ್ನು ವೈಯಕ್ತಿಕವಾಗಿ ನೀಡುವುದಾಗಿ ಹೇಳಿದರು.

ನಗರ ಪ್ರದೇಶದಲ್ಲಿ 40 ಕಿ.ಮೀ. ವೇಗದಲ್ಲಿ ಯಾವುದೇ ವಾಹನ ಆದ್ರೂ ಸಂಚರಿಸಬೇಕು. ಆದ್ರೆ ಲಾರಿ ಚಾಲಕ ತುಂಬಾ ವೇಗವಾಗಿ ಬಂದು ಕಂಟ್ರೋಲ್ ಮಾಡಲಾಗದೇ ಈ ಕೃತ್ಯ ಎಸಗಿದ್ದಾನೆ. ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರದ ಅಡಿಪಾಯ ಕುಸಿಯುತ್ತಿದೆ ಎಂದ ನಾಯಕ