Publish Date: Wed, 03 Oct 2018 (09:03 IST)
Updated Date: Wed, 03 Oct 2018 (09:08 IST)
ಮೈಸೂರು : ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುವ ಕಾರ್ ರೇಸ್ ನಲ್ಲಿ ಭಾಗವಹಿಸಲು ನಟ ದರ್ಶನ್ ಅವರಿಗೆ ಲೈಸನ್ಸ್ ಸಿಕ್ಕಿದೆ.
ಹೌದು. ಮೈಸೂರು ದಸರಾ ಮಹೋತ್ಸವ ಅಂಗವಾಗಿ ಲಲಿತ್ ಮಹಲ್ ನ ಹೆಲಿಪ್ಯಾಡ್ ಮೈದಾನದಲ್ಲಿ ಅಕ್ಟೋಬರ್ 6 ಮತ್ತು 7ರಂದು ಕಾರ್ ರೇಸ್ ನಡೆಯಲಿದೆ. ಈ ರೇಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗುವುದಕ್ಕಾಗಿ ತಯಾರಿ ಮಾಡಿಕೊಂಡಿದ್ದರು.
ಆದರೆ ಇತ್ತೀಚೆಗೆ ನಡೆದ ಕಾರ್ ಅಪಘಾತದಿಂದ ಬಲಗೈಗೆ ಪೆಟ್ಟುಮಾಡಿಕೊಂಡ ನಟ ದರ್ಶನ್ ಅವರಿಗೆ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಆದರೆ ಈ ವೇಳೆ ಮಧ್ಯೆ ಗ್ರಾವೆಲ್ ಫೆಸ್ಟ್ 2018 ಕಾರ್ ರೇಸ್ ನಲ್ಲಿ ಭಾಗವಹಿಸಲು ದರ್ಶನ್ ಲೈಸನ್ಸ್ ಪಡೆದುಕೊಂಡಿರುವುದು ಕುತೂಹಲ ಮೂಡಿಸಿದೆ. ದರ್ಶನ್ ಅವರ ಕಾರ್ ರೇಸ್ ಲೈಸನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.