Select Your Language

Notifications

webdunia
webdunia
webdunia
webdunia

ಅಭಿಮಾನಿಗಳನ್ನು ಕಾಲಿನಿಂದ ತುಳಿದ ಟಾಲಿವುಡ್ ನಟ ಬಾಲಕೃಷ್ಣ

ಅಭಿಮಾನಿಗಳನ್ನು ಕಾಲಿನಿಂದ ತುಳಿದ ಟಾಲಿವುಡ್ ನಟ ಬಾಲಕೃಷ್ಣ
ಹೈದರಾಬಾದ್ , ಬುಧವಾರ, 3 ಅಕ್ಟೋಬರ್ 2018 (08:57 IST)
ಹೈದರಾಬಾದ್ : ಟಾಲಿವುಡ್ ನಟ ಬಾಲಕೃಷ್ಣ ಅವರು ಅಭಿಮಾನಿಗಳನ್ನು ಹೊಡೆದು ಕಾಲಿನಲ್ಲಿ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ನಟ, ರಾಜಕಾರಣಿ ಬಾಲಕೃಷ್ಣ ಅವರು ಇತ್ತೀಚಿಗೆ ತೆಲಂಗಾಣದ ಕಮ್ಮಮ್​ ಜಿಲ್ಲೆಯಲ್ಲಿ ರಾಜಕೀಯ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಭಿಮಾನಿಗಳು ಬಾಲಯ್ಯ ಪ್ರಯಾಣಿಸುತ್ತಿದ್ದ ಕಾರು ನಿಲ್ಲಿಸಲು ಯತ್ನಿಸಿದ್ದರಂತೆ. ಇದರಿಂದ ಕೋಪಗೊಂಡ ಬಾಲಯ್ಯ, ಕಾರಿನಿಂದಿಳಿದು ಕೆಲ ಅಭಿಮಾನಿಗಳಿಗೆ ಹೊಡೆದಿದ್ದಷ್ಟೆ ಅಲ್ಲದೇ, ಕಾಲಿನಿಂದ ಒದ್ದಿದ್ದಾರೆ. ಆದಕಾರಣ ಬಾಲಯ್ಯ ಕ್ಷಮೆ ಕೇಳಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.   


ಈ ಹಿಂದೆ ಕೂಡ ಇವರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಿರ್ದೇಶಕ ಮಣಿರತ್ನಂ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲು ಕಾರಣವೇನು?