Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್; ಸೈಬರ್ ಠಾಣೆಗೆ ದೂರು ನೀಡಿದ ಸತ್ಯಮೂರ್ತಿ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್; ಸೈಬರ್ ಠಾಣೆಗೆ ದೂರು ನೀಡಿದ ಸತ್ಯಮೂರ್ತಿ
ಮೈಸೂರು , ಬುಧವಾರ, 3 ಅಕ್ಟೋಬರ್ 2018 (08:30 IST)
ಮೈಸೂರು : ಪ್ರಧಾನಿ ಮೋದಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸತ್ಯಮೂರ್ತಿ ಎಂಬುವವರು ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಫೇಸ್​ಬುಕ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರ ಸಂದೇಶಗಳು ಹರಿದಾಡುತ್ತಿವೆ. ಇದರಿಂದ ದೇಶಕ್ಕೇ  ಅಪಮಾನವಾಗುತ್ತಿದೆ. ಮೆಸ್ಸೇಜ್, ವಿಡಿಯೋಗಳು, ಅನಿಮೇಷನ್ ಚಿತ್ರಗಳಲ್ಲಿ ಪ್ರಧಾನಿ ಮೋದಿಯನ್ನು ಅವಮಾನಿಸುವ ಯತ್ನ ನಡೆಸಿದ್ದಾರೆ


ಈ ರೀತಿಯಲ್ಲಿ ದೇಶದ ಉನ್ನತ ಸ್ನಾನದಲ್ಲಿರುವ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಲೀಗಲ್ ಮತ್ತು ಪಾರ್ಲಿಮೆಂಟರಿ ಸೆಲ್​​ಕೋ ಕನ್ವೇಯರ್ ಸತ್ಯಮೂರ್ತಿ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪು ಮಹಿಳೆಯ ಸಾವಿಗೆ ಕಾರಣವಾಯ್ತಾ?