Select Your Language

Notifications

webdunia
webdunia
webdunia
webdunia

ಮನೆಗೆ ಬಂದು ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆಗೆ ನೋಟಿಸ್ ಜಾರಿಮಾಡಿದ ಶಾಸಕ

ಮನೆಗೆ ಬಂದು ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆಗೆ ನೋಟಿಸ್ ಜಾರಿಮಾಡಿದ ಶಾಸಕ
ಮೈಸೂರು , ಶನಿವಾರ, 29 ಸೆಪ್ಟಂಬರ್ 2018 (12:33 IST)
ಮೈಸೂರು : ಮೈಸೂರಿನ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್  ಅವರಿಗೆ ಸರ್ಕಾರಿ ಆಸ್ಪತ್ರೆ ವೈದ್ಯೆ ವೀಣಾಸಿಂಗ್ ಮನೆಗೆ ಬಂದು ಚಿಕಿತ್ಸೆ ನೀಡಲಿಲ್ಲವೆಂದು ಅಮಾನತು ನೋಟಿಸ್ ಕಳಿಸಿದ್ದಾರೆ.


ಶಾಸಕ ಕೆ. ಮಹದೇವ್ ಸೆ. 18 ರಂದು ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಚಿಕಿತ್ಸೆ ನೀಡಲು ಸರ್ಕಾರಿ ಅಸ್ಪತ್ರೆ ವೈದ್ಯೆ ವೀಣಾಸಿಂಗ್ ಅವರನ್ನು ಮನೆಗೆ ಕರೆದಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳು ಹೆಚ್ಚಾಗಿರುವ ಕಾರಣ ವೀಣಾಸಿಂಗ್ ಮನೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ಇದರಿಂದ ಕೋಪಗೊಂಡ ಶಾಸಕ ಕೆ. ಮಹದೇವ್ ವೈದ್ಯೆ ಮೇಲೆ ವಿಧಾನಸೌಧದಲ್ಲಿ ಹಕ್ಕು ಬಾದ್ಯತಾ ದೂರು ಸಲ್ಲಿಸಿದ್ದು, ವೀಣಾಸಿಂಗ್ ಅವರನ್ನು ಸಸ್ಪೆಂಡ್ ಮಾಡಿಸಲು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ನಾಯಕರಿಂದ ಕಾನೂನು ಉಲ್ಲಂಘನೆ ; ಬುಲೆಟ್ ನಲ್ಲಿ ಟ್ರಿಪಲ್ ರೈಡ್ ಸಚಿವ ಜಮೀರ್ ಅಹಮದ್