Publish Date: Mon, 15 Oct 2018 (09:23 IST)
Updated Date: Mon, 15 Oct 2018 (09:25 IST)
ಮುಂಬೈ: ವಿಮಾನದ ಬಾಗಿಲು ಹಾಕುತ್ತಿದ್ದ 53 ವರ್ಷದ ಗಗನಸಖಿಯೊಬ್ಬರು ಅಕಸ್ಮಾತ್ತಾಗಿ ವಿಮಾನದಿಂದ ಬಿದ್ದು ಗಾಯಗೊಂಡ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಗಗನಸಖಿ ದುರ್ಘಟನೆಗೀಡಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಕಾಲು ಮೂಳೆ ಮುರಿದಿದೆ ಎನ್ನಲಾಗಿದೆ.
ಹರ್ಷ ಲೋಬೋ ಎಂಬ ಹೆಸರಿನ ಗಗನಸಖಿ ವಿಮಾನ ಹೊರಡಲು ತಯಾರಾಗಿದ್ದ ವೇಳೆ ಬಾಗಿಲು ಹಾಕಲು ಯತ್ನಿಸಿದ್ದಾಳೆ. ಈ ಘಟನೆಯಿಂದಾಗಿ ಮೊದಲೇ 90 ನಿಮಿಷ ತಡವಾಗಿದ್ದ ವಿಮಾನ ಮತ್ತಷ್ಟು ವಿಳಂಬವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.