Select Your Language

Notifications

webdunia
webdunia
webdunia
webdunia

ಲವ್ ಪ್ರಪೋಸಲ್ ಒಪ್ಪಿದ್ದಕ್ಕೆ ಕೆಲಸ ಕಳೆದುಕೊಂಡ ಚೈನಾ ಮೂಲದ ಗಗನಸಖಿ

webdunia
ಚೀನಾ , ಸೋಮವಾರ, 17 ಸೆಪ್ಟಂಬರ್ 2018 (12:58 IST)
ಚೀನಾ : ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಯುವಕನೊಬ್ಬ ಗಗನಸಖಿಗೆ ಲವ್ ಪ್ರಪೋಸ್ ಮಾಡಿದ್ದು, ಇದಕ್ಕೆ ಒಪ್ಪಿಕೊಂಡಿದ್ದಕ್ಕೆ ಇದೀಗ ಆಕೆ ಕೆಲಸ ಕಳೆದುಕೊಂಡಿದ್ದಾಳೆ.

ಚೀನಾ ಈಸ್ಟರ್ನ್ ‌ಏರ್ವೇಸ್ ಸಂಸ್ಥೆಯ ಗಗನಸಖಿಯೊಬ್ಬಳಿಗೆ ಯುವಕನೊಬ್ಬ ಒಂದು ತಿಂಗಳ ಹಿಂದೆ ವಿಮಾನ ಹಾರಾಟದ ಮಧ್ಯೆ ಪ್ರಪೋಸ್ ಮಾಡಿದ್ದ. ಈ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದ ಗಗನಸಖಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿತ್ತು.

 

ಆದರೆ ಈ ಘಟನೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಚೀನಾ ಈಸ್ಟರ್ನ್ ಏರ್ಲೈನ್ಸ್ ಉನ್ನತ‌ ಅಧಿಕಾರಿಗಳು‌‌ ಗಗನಸಖಿಯ ಈ ರೀತಿಯ ವರ್ತನೆ ಪ್ರಯಾಣಿಕರ ಸುರಕ್ಷತೆಗೆ ಮಾರಕವಾಗಿದೆ ಎಂದು ಆಕೆಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.

 

ಅಧಿಕಾರಿಗಳ ಈ ನಡೆಗೆ ಚೀನಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ಕೆಲವರು ಯುವತಿಯ ಪರವಾಗಿ ಮಾತನಾಡಿದರೆ, ಇನ್ನು ಕೆಲವರು ಸುರಕ್ಷಿತ ವಿಚಾರದಲ್ಲಿ ರಾಜಿಯಾಗಬಾರದು ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ