Publish Date: Mon, 30 Jul 2018 (09:06 IST)
Updated Date: Mon, 30 Jul 2018 (09:08 IST)
ನವದೆಹಲಿ: ಮತ್ತೆ ಢೋಕ್ಲಾಂ ಗಡಿಯಲ್ಲಿ ಚೀನಾ ಸೇನೆ ಬೀಡುಬಿಟ್ಟಿದೆ ಎಂಬ ಸುದ್ದಿಗಳ ಹಿನ್ನಲೆಯಲ್ಲಿ ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿದೆ.
ಡೋಕ್ಲಾಂನಲ್ಲಿ ಚೀನಾ ಸೈನಿಕರು 80 ಮೀಟರ್ ಗಳಷ್ಟು ಮುಂದಕ್ಕೆ ಬಂದಿದ್ದಾರೆಂಬ ವರದಿಯಿದ್ದರೂ ಭಾರತೀಯ ಸೇನೆ ಏನೂ ಮಾಡುತ್ತಿಲ್ಲ ಎಂದು ಇತ್ತೀಚೆಗೆ ಅಮೆರಿಕಾ ಕೂಡಾ ಆಕ್ಷೇಪಿಸಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ ಇದು ಸಾಮಾನ್ಯ ಗಸ್ತು ತಿರುಗುವಿಕೆಯಷ್ಟೇ ಎಂದಿದೆ. ಇಲ್ಲಿ ಚೀನಾ ಗಡಿ ಭದ್ರತಾ ಪಡೆ ತನ್ನ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡಿದೆ ಎಂಬ ವರದಿಗಳನ್ನು ಭಾರತೀಯ ಸೇನಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.