Select Your Language

Notifications

webdunia
webdunia
webdunia
webdunia

ಚುನಾವಣೆ ಗೆಲ್ಲಿಸಿದ ಜೈಶ್ ಉಗ್ರರಿಗೆ ಪಾಕಿಸ್ತಾನದ ನೂತನ ನಾಯಕ ಇಮ್ರಾನ್ ಖಾನ್ ರಿಂದ ಬಿಗ್ ಗಿಫ್ಟ್!?

ಚುನಾವಣೆ ಗೆಲ್ಲಿಸಿದ ಜೈಶ್ ಉಗ್ರರಿಗೆ ಪಾಕಿಸ್ತಾನದ ನೂತನ ನಾಯಕ ಇಮ್ರಾನ್ ಖಾನ್ ರಿಂದ ಬಿಗ್ ಗಿಫ್ಟ್!?
ಇಸ್ಲಾಮಾಬಾದ್ , ಶನಿವಾರ, 28 ಜುಲೈ 2018 (10:15 IST)
ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣವಾದ ಉಗ್ರರಿಗೆ ನೂತನ ನಾಯಕ ಇಮ್ರಾನ್ ಖಾನ್ ಉಡುಗೊರೆ ನೀಡುತ್ತಿದ್ದಾರೆಯೇ?

ತಾನು ಪ್ರಧಾನಿಯಾಗಲು ಇಮ್ರಾನ್ ಖಾನಗೆ ಇನ್ನೂ ಪಕ್ಷೇತರರ ಬೆಂಬಲ ಬೇಕಾಗಿದೆ. ಅದಕ್ಕಿಂತ ಮೊದಲೇ ತಾನು ಪ್ರಧಾನಿಯಾಗಿ ದೇಶದಲ್ಲಿ ವಿಐಪಿ ಸಂಸ್ಕೃತಿ ನಿವಾರಿಸಿ ಹೊಸದೊಂದು ಪಾಕಿಸ್ತಾನ ಕಟ್ಟುತ್ತೇನೆಂದು ಘೋಷಣೆ ಮಾಡಿದ್ದಾರೆ.

ಆದರೆ ಪಾಕಿಸ್ತಾನವನ್ನು ಹೊಸದಾಗಿ ನಿರ್ಮಿಸುತ್ತಾರೋ ಬಿಡುತ್ತಾರೋ ತಮಗೆ ಚುನಾವಣೆ ಗೆಲ್ಲಲು ಸಹಾಯ ಮಾಡಿದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಪಾಪಿಗಳ ಲೋಕ ವಿಸ್ತರಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ ಎನ್ನಲಾಗಿದೆ.

ಪಂಜಾಬ್ ಪ್ರಾಂತ್ಯದಲ್ಲಿ ದೊಡ್ಡ ಉಗ್ರ ತರಬೇತಿ ಕೇಂದ್ರ ಸ್ಥಾಪಿಸಲು ಬೇಕಾದ ಭೂಮಿ ಸೇರಿದಂತೆ ಎಲ್ಲಾ ಸಹಾಯವನ್ನೂ ಇಮ್ರಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯಾಡಳಿತವೇ ಉಗ್ರ ಸಂಘಟನೆಯ ನಾಯಕನ ಮಸೂದರ್ ಅಜರ್ ಹೆಸರಿನಲ್ಲಿ ಬೆಲೆ ಬಾಳುವ 15 ಎಕರೆ ಭೂಮಿ ಮಂಜೂರು ಮಾಡಿರುವುದು ಈ ಅನುಮಾನಗಳನ್ನು ಹೆಚ್ಚಿಸಿದೆ. ಪಾಕಿಸ್ತಾನದ ಪ್ರಧಾನಿ ಎಂದೇ ಬಿಂಬಿತವಾಗಿರುವ ಈ ಉಗ್ರ ಸಂಘಟನೆಗೆ ಇಮ್ರಾನ್ ಬೆಂಬಲ ನೀಡುತ್ತಿರುವುದರಿಂದ ಜೈಶ್ ಉಗ್ರ ಸಂಘಟನೆಯ ಬಲ ಹೆಚ್ಚಿಸಿದೆ. ಇದು ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲಾದ ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ