Publish Date: Fri, 12 Jan 2018 (08:11 IST)
Updated Date: Fri, 12 Jan 2018 (08:13 IST)
ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಹಾಲಿ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ನನಗೆ ಪಾಕಿಸ್ತಾನದ ಇಮ್ರಾನ್ ಖಾನ್ ನಾಯಕತ್ವದಲ್ಲಿ ಆಡುವ ಆಸೆಯಿತ್ತು ಎಂದಿದ್ದಾರೆ.
ತಮ್ಮ ‘ಇಂಪರ್ಫೆಕ್ಟ್’ ಹೆಸರಿನ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಂಜಯ್ ಮಂಜ್ರೇಕರ್ ಮನದಾಳ ಹಂಚಿಕೊಂಡಿದ್ದಾರೆ. ಇಮ್ರಾನ್ ಖಾನ್ ಎಂದರೆ ತಮ್ಮ ಮೆಚ್ಚಿನ ಆಟಗಾರ ಎಂದು ಮಂಜ್ರೇಕರ್ ಹೇಳಿದ್ದಾರೆ.
ಇನ್ನು ಭಾರತೀಯರ ಪೈಕಿ ಎಂಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲು ಬಯಸುತ್ತಿದ್ದೆ. ಈ ವೇಳೆ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ತಂಡಕ್ಕೆ ಬಂದ ಮೇಲೆ ಟೀಂ ಇಂಡಿಯಾದಲ್ಲಿ ನನ್ನ ಸ್ಥಾನಕ್ಕೆ ಕುತ್ತು ಬಂತು. ತಂಡಕ್ಕೆ ಮರಳಲು ರಣಜಿ ಆಡುವ ಸ್ಥಿತಿ ಎದುರಾಯಿತು ಎಂದಿದ್ದಾರೆ. ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗುವ ಸಂಭವವೂ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ