Select Your Language

Notifications

webdunia
webdunia
webdunia
webdunia

‘ಬೆಂಬಲ ಬೇಕಿದ್ದಾಗ ಅಜಿಂಕ್ಯಾ ರೆಹಾನೆಗೆ ಕೋಚ್ ರವಿಶಾಸ್ತ್ರಿ, ನಾಯಕ ಕೊಹ್ಲಿ ಕೈ ಕೊಟ್ಟರು!’

ಅಜಿಂಕ್ಯಾ ರೆಹಾನೆ
ಮುಂಬೈ: ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲವೆಂದು ಅಜಿಂಕ್ಯಾ ರೆಹಾನೆಯನ್ನು ಕಿತ್ತು ರೋಹಿತ್ ಶರ್ಮಾಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದು ಪ್ರವೀಣ್ ಆಮ್ರೆ ಅಭಿಪ್ರಾಯಪಟ್ಟಿದ್ದಾರೆ.
 

ರೆಹಾನೆ ಕೋಚ್ ಪ್ರವೀಣ್ ಆಮ್ರೆ ತನ್ನ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಗತ್ಯವಿದ್ದಾಗ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ರೆಹಾನೆಗೆ ಬೆಂಬಲ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

‘ಒಂದು ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲವೆಂದು ಹಳೆಯ ಪ್ರದರ್ಶನಗಳನ್ನು ಕಡೆಗಣಿಸಿ ರೆಹಾನೆಗೆ ಅವಕಾಶ ಕೊಡದೇ ಇದ್ದಿದ್ದು ಸರಿಯಲ್ಲ. ತಂಡದ ಉಪನಾಯಕನನ್ನೇ ಮಹತ್ವದ ಪಂದ್ಯದಿಂದ ಕೈಬಿಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಆಘಾತಕಾರಿ’ ಎಂದು ಆಮ್ರೆ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್!