Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರಿಸಿದ ಭೂಪ!

webdunia
ನವದೆಹಲಿ , ಶನಿವಾರ, 1 ಸೆಪ್ಟಂಬರ್ 2018 (11:22 IST)
ನವದೆಹಲಿ: ದೆಹಲಿ-ನ್ಯೂಯಾರ್ಕ್ ಗೆ ತೆರಳುತ್ತಿದ್ದ  ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಕೂತಿದ್ದ ಸೀಟಿಗೆ ಮೂತ್ರ ಮಾಡಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಪಾನಮತ್ತನಾಗಿದ್ದ ವ್ಯಕ್ತಿ ಮಹಿಳೆ ಕೂತಿದ್ದ ಸೀಟಿಗೆ ಮೂತ್ರಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಇದೀಗ ವಿಮಾನ ಯಾನ ಸಚಿವ ಜಯಂತ್ ಸಿನ್ಹಾ ತನಿಖೆಗೆ ಆದೇಶಿಸಿದ್ದಾರೆ.

ಇಂದ್ರಾಣಿ ಘೋಷ್ ಎಂಬ ಮಹಿಳೆ ಈ ಸಂಬಂಧ ನೇರವಾಗಿ ಸಚಿವರಿಗೆ ಟ್ವೀಟ್ ಮಾಡಿದ್ದು, ತನ್ನ ತಾಯಿ ಮೇಲೆ ಇಂತಹದ್ದೊಂದು ಅಸಭ್ಯ ವರ್ತನೆ ನಡೆದಿದೆ ಎಂದು ವಿಮಾನದ ಸಂಖ್ಯೆ ಸಮೇತ ದೂರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವರು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶುರುವಾಯ್ತು ಕಾಂಗ್ರೆಸ್ ನಲ್ಲಿ ನಾ ಕೊಡೆ, ನಾ ಬಿಡೆ ಜಗಳ!