Publish Date: Sat, 01 Sep 2018 (09:18 IST)
Updated Date: Sat, 01 Sep 2018 (09:20 IST)
ಬೆಂಗಳೂರು: ಮಹಿಳೆಯರಲ್ಲಿ ಇತ್ತೀಚೆಗೆ ಬಂಜೆತನ ಎನ್ನುವುದು ಸಾಮಾನ್ಯವಾಗುತ್ತಿದೆ. ಮಹಿಳೆಯರ ಬಂಜೆತನದ ಲಕ್ಷಣಗಳು ಯಾವುವು ಗೊತ್ತಾ?
ಅನಿಯಮಿತ ಮುಟ್ಟು, ಮುಟ್ಟು ಆಗದೇ ಇರುವುದು, ಮುಟ್ಟಿನ ಸಂದರ್ಭದಲ್ಲಿ ವಿಪರೀತ ನೋವು, ಲೈಂಗಿಕ ಕ್ರಿಯೆ ಸಂದರ್ಭ ನೋವು ಇಂತಹ ಸಮಸ್ಯೆಗಳಿದ್ದರೆ ಗರ್ಭಿಣಿಯಾಗುವುದು ಕಷ್ಟ. ಇಂತಹ ಸಮಸ್ಯೆಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಇದಲ್ಲದೆ ಗರ್ಭನಾಳದಲ್ಲಿ ತಡೆ, ಸರಿಯಾಗಿ ಅಂಡಾಣು ಬಿಡುಗಡೆಯಾಗದೇ ಇದ್ದಲ್ಲಿ, ಗರ್ಭಾಶಯದ ರಚನೆ ಮುಂತಾದವೂ ಗರ್ಭಿಣಿಯಾಗದೇ ಇರಲು ಕಾರಣವಾಗುತ್ತದೆ. ಅಂತಹ ಸಮಸ್ಯೆಗಳನ್ನು ಕಡೆಗಣಿಸದಿರಿ. ತಕ್ಷಣ ತಜ್ಞ ವೈದ್ಯರ ಸಲಹೆ ಪಡೆಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.