Publish Date: Sat, 01 Sep 2018 (10:38 IST)
Updated Date: Sat, 01 Sep 2018 (10:39 IST)
ಲಕ್ನೊ: ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಸಾಲ ಮರುಪಾವತಿ ವಿಚಾರಕ್ಕೆ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಅದೂ ಕೇವಲ 1500 ರೂ. ಸಾಲ ಮರುಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಇಬ್ಬರು ದುರುಳರು ತಮ್ಮಿಂದ ಸಾಲ ಪಡೆದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇಬ್ಬರನ್ನೂ ಪೊಲೀಸರು ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಅತ್ಯಾಚಾರದ ಕಾರಣ ವಿವರಿಸಿದ್ದಾರೆ. ಗುರುವಾರ ರಾತ್ರಿ ಅಂಗಡಿಗೆ ತನ್ನ ಸೈಕಲ್ ನಲ್ಲಿ ತೆರಳಿ ಮನೆಗೆ ಮರಳುತ್ತಿದ್ದಾಗ ಯುವತಿಯನ್ನು ಎಳೆದೊಯ್ದ ಕಾಮುಕರು ಅತ್ಯಾಚಾರವೆಸಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.