ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿಯಾಗಿ 10 ಕಿ.ಮೀನಷ್ಟು ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ.
ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಟ್ರಾಫಿಕ್ ಜಾಮ್ ಸಮಸ್ಯೆ ಸವಾರರನ್ನು ಕಾಡುತ್ತಿದೆ. 10 ಕಿ.ಮೀ ನಷ್ಟು ದೂರ ಸಾಲುಗಟ್ಟಿ ನಿಂತ ವಾಹನಗಳ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು.
ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗೂ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿತ್ತು.
ಚಿಕ್ಕಮಗಳೂರು-ಧರ್ಮಸ್ಥಳ-ಮಂಗಳೂರು-ಬೆಂಗಳೂರು ಸಂಪರ್ಕಿಸುವ ಚಾರ್ಮಾಡಿ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ತಿರುವಿನಲ್ಲಿಲಾರಿ ಪಲ್ಟಿಯಾಗಿದ್ದೇ ಟ್ರಾಫಿಕ್ ಸಮಸ್ಯೆಗೆ ಕಾರಣವಾಯಿತು.
ಟ್ರಾಫಿಕ್ ನಿಯಂತ್ರಿಸಲು ಬಣಕಲ್ ಪೊಲೀಸರು ಹರಸಾಹಸಪಟ್ಟರು.