Publish Date: Tue, 16 Oct 2018 (09:17 IST)
Updated Date: Tue, 16 Oct 2018 (09:19 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಪುರುಷರಲ್ಲೂ ಫಲವಂತಿಕೆ ಕೊರತೆ ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಇದು ನಿಜಕ್ಕೂ ಗಂಭೀರವಾಗಿ ಚಿಂತಿಸುವ ವಿಚಾರವೇ.
ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ ಎಂದು ವಿದೇಶೀ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಆಧುನಿಕ ಜೀವನ ಶೈಲಿ, ಒತ್ತಡ, ವಿಷಕಾರಿ ಆಹಾರಗಳೇ ಕಾರಣ ಎಂದು ತಜ್ಞರು ಹೇಳುತ್ತಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ 1970 ರ ದಶಕದಿಂದ 2018 ರವರೆಗೆ ಹೋಲಿಸಿದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಶೇ. 59 ರಷ್ಟು ಕಡಿಮೆಯಾಗುತ್ತಾ ಬಂದಿದೆಯಂತೆ! ಇದಕ್ಕೆ ಕಾರಣ ಇಂದು ನಾವು ಸೇವಿಸುತ್ತಿರುವ ಆಹಾರವೂ ಪ್ರಮುಖವಾದುದು ಎನ್ನುವುದು ತಜ್ಞರ ಅಭಿಪ್ರಾಯ. ಅದೇ ಕಾರಣಕ್ಕೆ ಇತ್ತೀಚೆಗೆ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಮತ್ತು ಫಲವಂತಿಕೆ ನಶಿಸುತ್ತಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.