Select Your Language

Notifications

webdunia
webdunia
webdunia
webdunia

ಜಾರಕಿಹೊಳಿ ಸಹೋದರರು ಹೇಳುತ್ತಿರುವುದು ಒಂದು ಒಳಗಿನ ಲೆಕ್ಕಾಚಾರವೇ ಇನ್ನೊಂದು

ಜಾರಕಿಹೊಳಿ ಸಹೋದರರು ಹೇಳುತ್ತಿರುವುದು ಒಂದು ಒಳಗಿನ ಲೆಕ್ಕಾಚಾರವೇ ಇನ್ನೊಂದು
ಬೆಂಗಳೂರು , ಮಂಗಳವಾರ, 18 ಸೆಪ್ಟಂಬರ್ 2018 (08:43 IST)
ಬೆಂಗಳೂರು: ಬೆಳಗಾವಿ ಕಾಂಗ್ರೆಸ್ ನ ಪ್ರಬಲ ನಾಯಕರಾದ ಜಾರಕಿಹೊಳಿ ಸಹೋದರರು ತಾವು ಬಿಜೆಪಿ ಸೇರುತ್ತಿಲ್ಲ, ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ತರಲ್ಲ ಎಂದು ಹೊರಗೆ ಹೇಳಿಕೊಳ್ಳುತ್ತಿದ್ದರೂ ಒಳಗೊಳಗೇ ಬಂಡಾಯಕ್ಕೆ ಭಾರೀ ಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವೇಳೆ ರಮೇಶ್ ಜಾರಕಿಹೊಳಿ ತಮ್ಮ ಸಮಸ್ಯೆ ಬಗೆಹರಿಸಲು ಸ್ವತಃ ರಾಹುಲ್ ಗಾಂಧಿಯವರೇ ಮಧ್ಯಪ್ರವೇಶಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಬೆಂಬಲಿತ 18 ಶಾಸಕರ ರಾಜೀನಾಮೆ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಹಾಗಿದ್ದರೂ ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರಿಗೆ ವಿಶ್ ಮಾಡಲು ಹೋಗಿದ್ದೆ ಅಷ್ಟೆ. ನಾನು ಯಾರ ಜತೆಯಲ್ಲೂ ಪ್ರತ್ಯೇಕ ಸಭೆ ನಡೆಸಿಲ್ಲ ಎಂದಿದ್ದಾರೆ. ಈ ನಡುವೆ ಇಂದು ರಾಜ್ಯ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಲಿದ್ದು, ಈ ವೇಳೆ ರಾಜ್ಯದ ವಿದ್ಯಮಾನಗಳ ಬಗ್ಗೆ ವರದಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರಿಗೂ ಬುಲಾವ್ ನೀಡುವ ಸಾಧ್ಯೆತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ರಾಜ್ಯ ಸಚಿವೆಗೆ ವರದಕ್ಷಿಣೆ ಕಿರುಕಳ; ಸಚಿವೆಯನ್ನು ಜೀವಂತವಾಗಿ ಸುಡಲು ಯತ್ನಿಸಿದ ಮಾವ