Publish Date: Mon, 17 Sep 2018 (08:37 IST)
Updated Date: Mon, 17 Sep 2018 (08:40 IST)
ಬೆಂಗಳೂರು: ಹಿಂದೀ ಭಾಷೆಯನ್ನು ವಿರೋಧಿಸುವ ಕನ್ನಡಿಗರು ಮೂರ್ಖರು ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದೀ ಭಾಷೆ ಸಂವಿಧಾನದಲ್ಲಿ ಇರುವ ಪ್ರಮುಖ ಭಾಷೆ. ಇದನ್ನು ವಿರೋಧಿಸಿ ಕನ್ನಡಕ್ಕೇ ಪ್ರಾಶಸ್ತ್ಯ ನೀಡಬೇಕೆನ್ನುವ ಕನ್ನಡಿಗರ ನಡೆ ಮೂರ್ಖತನದ್ದು ಎಂದು ಸುಬ್ರಮಣಿಯನ್ ಸ್ವಾಮಿ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.
ತಮಿಳರು ಮಾಡಿದಂತೆ ಕನ್ನಡಿಗರೂ ಹಿಂದೀ ಭಾಷೆ ವಿರೋಧಿಸಿ ಮೂರ್ಖತನ ಮಾಡುತ್ತಿದ್ದಾರೆ ಎಂದು ಅವರು ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗುವ ಎಲ್ಲಾ ಲಕ್ಷಣಗಳು ತೋರುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.