Publish Date: Wed, 08 Aug 2018 (09:39 IST)
Updated Date: Wed, 08 Aug 2018 (09:40 IST)
ನವದೆಹಲಿ: ಪ್ರಧಾನಿ ಮೋದಿ ಮುಸ್ಲಿಮರ ಟೋಪಿ ಯಾಕೆ ಹಾಕಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದರ ಶಶಿ ತರೂರ್ ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ತಿರುಗೇಟು ನೀಡಿದ್ದಾರೆ.
‘ಸೂಟು ಬೂಟು ಹಾಕಿದ್ರೆ ಹೋಟೆಲ್ ವೈಟರ್ ಥರಾ ಕಾಣಿಸ್ತೀಯಾ. ನಿಮ್ಮ ಈ ಸೂಟು ಬೂಟಿನ ವೇಷ ಕೂಡಾ ನಮಗೆ ಹೊಸದಲ್ಲ’ ಎಂದು ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ.
ಶಶಿ ತರೂರ್ ಪ್ರಧಾನಿ ಮೋದಿ ಬಗ್ಗೆ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಶಿ ತರೂರ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಟೋಪಿ ಬಗ್ಗೆ ಪ್ರಸ್ತಾಪಿಸಿ ಶಶಿ ತರೂರ್ ಈ ಸಂಸ್ಕೃತಿಗೇ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.