Publish Date: Mon, 17 Sep 2018 (06:53 IST)
Updated Date: Mon, 17 Sep 2018 (06:57 IST)
ಹೈದರಾಬಾದ್ : ಚಾಕ್ಲೇಟ್ ನೀಡುವುದಾಗಿ ಆಮಿಷಯೊಡ್ಡಿ ಯುಕೆಜಿ ಓದುತ್ತಿರುವ ಐದು ವರ್ಷದ ವಿದ್ಯಾರ್ಥಿನಿಯೊಬ್ಬಳನ್ನ ಶಾಲೆಯ ಸಿಬ್ಬಂದಿಯೊಬ್ಬ ಶಾಲಾ ಆವರಣದಲ್ಲಿಯೇ ಅತ್ಯಾಚಾರ ಎಸಗಿದ ಅಮಾವನೀಯ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಶನಿವಾರ ಶಾಲೆಗೆ ಬಂದಿದ್ದ ಯುಕೆಜಿ ಓದುತ್ತಿರುವ ಐದು ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಶಾಲೆಯ ಸಿಬ್ಬಂದಿಯೊಬ್ಬ ಚಾಕ್ಲೇಟ್ ನೀಡುತ್ತೇನೆ ಎಂದು ಹೇಳಿ ಕರೆದುಹೋಗಿ ಶಾಲಾ ಆವರಣದಲ್ಲಿಯೇ ಅತ್ಯಾಚಾರ ಎಸಗಿದ್ದಾನೆ.
ಈ ವಿಚಾರ ತಿಳಿಯುತ್ತಿದ್ದಂತೆ ಸಂತ್ರಸ್ತೆಯ ಪೋಷಕರು ಶಾಲೆಗೆ ನುಗ್ಗಿ, ಪೀಠೋಪಕರಣ, ಕಟ್ಟದ ಸೇರಿದಂತೆ ವಿವಿಧ ವಸ್ತುಗಳನ್ನು ದ್ವಂಸಗೊಳಿಸಿದ್ದಾರೆ. ಗಲಾಟೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೀಗ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.