ನಮ್ಮನ್ನು ಕೆಣಕಿದರೆ ಮತ್ತೆ ಜೈಲಿಗೆ ಹೋಗಬೇಕಾದೀತು: ಜನಾರ್ಧನ ರೆಡ್ಡಿಗೆ ಸಿದ್ದರಾಮಯ್ಯ ಸವಾಲ್

ಮಂಗಳವಾರ, 30 ಅಕ್ಟೋಬರ್ 2018 (09:53 IST)
ಬಳ್ಳಾರಿ: ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಗಣಿ ದಣಿ ಜನಾರ್ಧನ ರೆಡ್ಡಿ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಾಕ್ ಪ್ರಹಾರ ನಡೆಸಿದ್ದಾರೆ.

ದೇಶವೇ ಬರಪೀಡಿತವಾಗಿದ್ದಾಗ ನೀವು ಚಿನ್ನದ ಕುರ್ಚಿ, ತಟ್ಟೆ ಲೋಟ ಪ್ರದರ್ಶಿಸುತ್ತಿದ್ದಿರಿ. ಇಷ್ಟೊಂದು ಹಣ ನಿಮಗೆ ಎಲ್ಲಿಂದ ಬಂತು? ಇದೆಲ್ಲಾ ಅಕ್ರಮ ಸಂಪಾದನೆ ತಾನೇ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ನಾನು ನಿಮ್ಮ ಸವಾಲು ಸ್ವೀಕರಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಮೇಲೆ ಬಳ್ಳಾರಿ ರಿಪಬ್ಲಿಕ್ ಕುಸಿಯಲಾರಂಭಿಸಿತು. ಅದರ ನಂತರ ಜನಾರ್ಧನ ರೆಡ್ಡಿ ಜೈಲು ಪಾಲಾದರು. ನಮ್ಮನ್ನು ಮತ್ತೆ ಕಣಕಲು ಬರಬೇಡಿ. ಬೇಲ್ ರದ್ದಾಗಿ ಜೈಲಿಗೆ ಹೋಗಬೇಕಾದೀತು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಇಂದೂ ಕೂಡಾ ಬಳ್ಳಾರಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮಾವೇಶ ನಡೆಯಲಿದ್ದು, ಭರ್ಜರಿ ಪ್ರಚಾರ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅರ್ಜುನ್ ಸರ್ಜಾ-ಶೃತಿ ಹರಿಹರನ್ ಭವಿಷ್ಯ ಇಂದು ನಿರ್ಧಾರ