ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಏಕವಚನ ಪ್ರಯೋಗಿಸಿದ ಜನಾರ್ಧನ ರೆಡ್ಡಿ

ಸೋಮವಾರ, 29 ಅಕ್ಟೋಬರ್ 2018 (18:00 IST)
ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಏಕವಚನ ಪ್ರಯೋಗಿಸಿ ಜನಾರ್ಧನ ರೆಡ್ಡಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷ ಇಂದು ವಲಸಿಗರ ಪಕ್ಷ ಆಗಿದೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಸಿದ್ದರಾಮಯ್ಯ ಸಿಎಂ ಆದರು.
ಕಾಂಗ್ರೆಸ್ ನಲ್ಲೇ ದುಡಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಅವಕಾಶವನ್ನು ಕಾಂಗ್ರೆಸ್ನವರು ನೀಡಿಲ್ಲ ಎಂದು ಜನಾರ್ಧನ ರೆಡ್ಡಿ ಆರೋಪಿಸಿದರು.

ಹಣದ ಮೂಲಕ ಜನರನ್ನು ಕೊಳ್ಳಲು ಕಾಂಗ್ರೆಸ್ ನವರು ಬಂದಿದ್ದಾರೆ. ಆದರೆ ಬಳ್ಳಾರಿ ಜನ ಮತ್ತು ತಾಯಿ ದುರ್ಗಮ್ಮ ಒಪ್ಪುವುದಿಲ್ಲ. ಇಂದು ಬಳ್ಳಾರಿ ಜಿಲ್ಲೆಯ ಯಾವ ಹಳ್ಳಿಗೆ ಯಾವ ಜನರನ್ನು ಮಾತಾಡಿಸಬೇಕು ಅಂತಾ ಡಿ.ಕೆ. ಶಿವ ಕುಮಾರ್ ಗೆ ಗೊತ್ತಿಲ್ಲ.

ಡಿ.ಕೆ.ಶಿವಕುಮಾರ್ ನೀನು ಮೊಳಕಾಲ್ಮೂರು ಅಥವಾ ರಾಂಪುರಕ್ಕೆ ಬಾ. ಹಣ ಇಟ್ಕೊಂಡು ಚುನಾವಣೆ ಮಾಡಬಹುದು ಅಂತಾ ಬಂದಿದ್ದೀಯ. ಮಾಧ್ಯಮದ ಮುಂದೆ ಕುಳಿತು ಇಬ್ಬರೂ ಮಾತಾಡೋಣ ಎಂದು ಸವಾಲು ಹಾಕಿದರು.

ಡಿ.ಕೆ.ಶಿವಕುಮಾರ್ ನೂರಕ್ಕೆ ನೂರರಷ್ಟು ಚರ್ಚೆಗೆ ಬರಲ್ಲ. ಯಾವ ಮುಖ ಇಟ್ಕೊಂಡು ಬರ್ತಾರೆ ಅವರು? ಎಂದು ಪ್ರಶ್ನಿಸಿದರು. ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಏಕವಚನ ಪ್ರಯೋಗಿಸಿ ಜನಾರ್ಧನ ರೆಡ್ಡಿ ದೂರಿದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೆಳಗಾವಿಯಲ್ಲಿ ಮತ್ತೆ ಕಲ್ಲು ತೂರಾಟ