Publish Date: Wed, 31 Oct 2018 (14:40 IST)
Updated Date: Wed, 31 Oct 2018 (14:43 IST)
#meetoo ಅಭಿಯಾನಕ್ಕೆ ಹಾಸನದ ಯುವತಿಯೊಬ್ಬಳು ಕೈ ಜೋಡಿಸಿದ್ದಾಳೆ.
ಸಾಮಾಜಿಕ ಜಾಲತಾಣಗಳ ಮೂಲಕ ನೋವು ಹೊರ ಹಾಕಿದ್ದಾಳೆ ಹೆಸರೇಳಲಿಚ್ಚದ ಯುವತಿ. ಹಾಸನದ ಸರ್ಕಾರಿ ನೌಕರನೊರ್ವನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಳೆ.
ಕೆಲಸ ಕೊಡಿಸುವ ಹೆಸರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಮುತ್ತು ನೀಡುವಂತೆ ಒತ್ತಾಯಿಸಿ ಹಾಗೂ ಎಲ್ಲಾ ರೀತಿಯಲ್ಲಿಯೂ ಸಹಕರಿಸುವಂತೆ ಒತ್ತಾಯ ಮಾಡಿದ್ದಾನೆ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಮೊಬೈಲ್ ನಂಬರ್ ಪಡೆದು ಕಿರುಕುಳ ನೀಡುತ್ತಿದ್ದ ಸರ್ಕಾರಿ ನೌಕರ, ಬೇಕಾದಷ್ಟು ಹಣ ನೀಡುವಂತೆ ಆಮಿಷ ಕೂಡ ಒಡ್ಡಿದ್ದನು. 3 ತಿಂಗಳ ಹಿಂದೆ ನಡೆದಿದ್ದ ಘಟನೆ ಇದಾಗಿದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮುದುಕನ ಚಪಲದ ಬಿಚ್ಚಿಟ್ಟ ಸಂತ್ರಸ್ತೆ, ಟಿವಿಗಳಲ್ಲಿ ಮಹಿಳೆಯರ #meetoo ಆರೋಪಗಳೇ ನನಗೆ ಪ್ರೇರಣೆಯಾಗಿವೆ. ಈ ಪ್ರಕರಣದಿಂದ ಖಿನ್ನತೆಗೆ ಒಳಗಾಗಿದ್ದೆ. ನನ್ನಂತಹ ಅಮಾಯಕ ಹೆಣ್ಣುಮಕ್ಕಳಿಗೆ ನ್ಯಾಯ ಬೇಕು.
ಹಾಸನದ ಎಸ್ಪಿ ಪ್ರಕಾಶ್ ಗೌಡರು ನೆರವಿಗೆ ಬರುವಂತೆ ಮನವಿ ಮಾಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ವಿಡಿಯೋ ಶೇರ್ ಆಗುತ್ತಿದೆ. ನಿವೃತ್ತಿ ಅಂಚಿನಲ್ಲಿರೋ ಹಾಸನದ ಸರ್ಕಾರಿ ನೌಕರ ಕೃಷ್ಣೇಗೌಡನ ವಿರುದ್ಧ
ಸಾಕ್ಷಿಸಮೇತ ಆರೋಪ ಮಾಡಿ, ನ್ಯಾಯಕ್ಕಾಗಿ ಯುವತಿ ಆಗ್ರಹ ಮಾಡಿದ್ದಾಳೆ.