ಅಪ್ಪನಾಗುವುದನ್ನು ಮುಂದೂಡುವ ಪುರುಷರೇ ಹುಷಾರ್!

ಸೋಮವಾರ, 5 ನವೆಂಬರ್ 2018 (06:32 IST)
ಬೆಂಗಳೂರು: ಮದುವೆಯಾದ ತಕ್ಷಣವೇ ಮಕ್ಕಳನ್ನು ಹಡೆದು ದಾಂಪತ್ಯ ಜೀವನದ ಖುಷಿಯನ್ನು ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. ಕೆಲವು ಸಮಯ ಪತ್ನಿ ಜತೆ ಜಾಲಿಯಾಗಿರೋಣ ಎಂದು ತಂದೆಯಾಗುವುದನ್ನು ಮುಂದೂಡುವ ಪುರುಷರೇ ಎಚ್ಚರ!

ಈ ರೀತಿ ಮಾಡುವುದರಿಂದ ಮುಂದೆ ನಿಮಗೆ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ ಅಮೆರಿಕಾದ ಸಂಶೋಧನ ವರದಿ. ಬರೀ ಮಗುವಿಗೆ ಮಾತ್ರವಲ್ಲ, ಮಗುವನ್ನು ಹಡೆಯುವ ಮಹಿಳೆಗೂ ಇದರಿಂದ ತೊಂದರೆ ತಪ್ಪಿದ್ದಲ್ಲ ಎಂದಿದೆ ಅಧ್ಯಯನ ವರದಿ.

ಪುರುಷರ ವಯಸ್ಸು ಹೆಚ್ಚಾದಂತೆ ಹುಟ್ಟುವ ಮಗು ಅಕಾಲಿಕವಾಗಿ ಜನನವಾಗುವುದು, ಹುಟ್ಟು ವೈಕಲ್ಯಗಳು, ಹುಟ್ಟುವಾಗ ಕಡಿಮೆ ತೂಕವಿರುವುದು, ಇತ್ಯಾದಿ ನವಜಾತ ಶಿಶುವಿನ ಸಮಸ್ಯೆಗೆ ಗುರಿಯಾಗಬೇಕಾಗುತ್ತದಂತೆ. ಅಷ್ಟೇ ಅಲ್ಲದೆ, ಮಹಿಳೆಯ ಆರೋಗ್ಯದ ಮೇಲೂ ಇದರಿಂದ ಪರಿಣಾಮವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದ್ಯಪಾನಿಗಳೇ ಎಚ್ಚರ! ಆಲ್ಕೋಹಾಲ್​ ಗೆ ಇದನ್ನು ಮಿಕ್ಸ್ ಮಾಡಿ ಕುಡಿದರೆ ಅಪಾಯ