ಮದ್ಯಪಾನಿಗಳೇ ಎಚ್ಚರ! ಆಲ್ಕೋಹಾಲ್​ ಗೆ ಇದನ್ನು ಮಿಕ್ಸ್ ಮಾಡಿ ಕುಡಿದರೆ ಅಪಾಯ

ಭಾನುವಾರ, 4 ನವೆಂಬರ್ 2018 (13:15 IST)
ಬೆಂಗಳೂರು : ಹೆಚ್ಚಾಗಿ ಮದ್ಯಪಾನ ಸೇವಿಸುವವರು ಆಲ್ಕೋಹಾಲ್​ ಗೆ ಸೋಡಾ ಅಥವಾ ನೀರು ಮಿಶ್ರಣ ಮಾಡಿ ಸೇವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಲ್ಕೋಹಾಲ್​ ಗೆ ಎನರ್ಜಿ ಡ್ರಿಂಕ್ ಸೇರಿಸಲಾಗುತ್ತಿದೆ. ಇದು ತುಂಬಾ ಅಪಾಯಕಾರಿ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.


ಈ ರೀತಿಯಲ್ಲಿ ಮದ್ಯ ಸೇವಿಸುವುದರಿಂದ ಮನುಷ್ಯರಲ್ಲಿ ನಕರಾತ್ಮಕ ಚಿಂತನೆ ಮೂಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.ಆಲ್ಕೋಹಾಲ್​ಗೆ ಎನರ್ಜಿ ಡ್ರಿಂಕ್ ಮಿಶ್ರ ಮಾಡಿ ಕುಡಿದರೆ ಹಿಂಸೆಗೆ ಪ್ರಚೋದನೆ ನೀಡುವುದಲ್ಲದೆ, ಅಪಾಯಕಾರಿ ನಡವಳಿಕೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


ಅಧ್ಯಯನದ ಪ್ರಕಾರ, ಇಬ್ಬರು ವ್ಯಕ್ತಿಗಳು ಜೊತೆಯಾಗಿ ಎನರ್ಜಿ ಡ್ರಿಂಕ್ಸ್​ನೊಂದಿಗೆ ಮದ್ಯಪಾನ ಮಾಡಿದರೆ ಇದರ ಪರಿಣಾಮ ಉಲ್ಬಣಗೊಳ್ಳಬಹುದು. ಇದರಿಂದ ಸಾಮಾಜಿಕ ಸಂವಹನವನ್ನು ಕಡಿಮೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹೋರಾಟ, ಹಿಂಸಾಚಾರ ಮತ್ತು ಅಪಾಯಕಾರಿ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಯಸ್ಸಿಗೆ ತಕ್ಕಂತೆ ನಿಮ್ಮ ದೇಹಕ್ಕೆ ಪ್ರತಿನಿತ್ಯ ಎಷ್ಟು ಪ್ರಮಾಣದ ಅಯೋಡಿನ್ ಅಗತ್ಯ ಎಂಬುದು ತಿಳಿಬೇಕಾ