Select Your Language

Notifications

webdunia
webdunia
webdunia
webdunia

ದೇವರ ಪೂಜೆಗೆ ಬಳಸುವ ಈ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆ ಇಡಬೇಡಿ

ದೇವರ ಪೂಜೆಗೆ ಬಳಸುವ ಈ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆ ಇಡಬೇಡಿ
ಬೆಂಗಳೂರು , ಭಾನುವಾರ, 4 ನವೆಂಬರ್ 2018 (13:12 IST)
ಬೆಂಗಳೂರು : ಕೆಲವರು ದೇವರ ಪೂಜೆ ಮಾಡುವ ಅವಸರದಲ್ಲಿ ದೇವರ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆಯೇ ಇಟ್ಟುಬಿಡುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಕೆಲವೊಂದು ಪೂಜಾ ಸಾಮಗ್ರಿಗಳನ್ನು ನೇರವಾಗಿ ನೆಲದ ಮೇಲಿಡಬಾರದಂತೆ.


*ಮರ ಅಥವಾ ಬೆಳ್ಳಿ, ಬಂಗಾರದ ಪೀಠದ ಮೇಲೆ ದೇವರ ಮೂರ್ತಿಗಳನ್ನಿಡಬೇಕು. ಅದ್ರಲ್ಲೂ ಪೀಠದ ಮೇಲೆ ಅಕ್ಕಿ ಹಾಕಿ ಅದ್ರ ಮೇಲೆ ಮೂರ್ತಿಗಳನ್ನಿಟ್ಟರೆ ಉತ್ತಮ.


*ಪೂಜಾ ಸ್ಥಳದಲ್ಲಿ ಮಣಿ ಅಥವಾ ರತ್ನವನ್ನಿಡ ಬಯಸಿದ್ದರೆ ಕೆಳಗೆ ಬಟ್ಟೆ ಇಟ್ಟು ಅದ್ರ ಮೇಲೆ ಮಣಿಯನ್ನಿಡಿ.


*ಜನಿವಾರವನ್ನು ಸ್ವಚ್ಛವಾಗಿರುವ ಬಟ್ಟೆ ಮೇಲಿಡಬೇಕು. ಶಂಖವನ್ನು ಕೂಡ ನೆಲಕ್ಕಿಡಬಾರದು.

*ಪೂಜೆಗೆ ಬಳಸುವ ಅಡಿಕೆಯನ್ನು ನೇರವಾಗಿ ನೆಲದ ಮೇಲಿಡುವುದು ಶುಭವಲ್ಲ. ನಾಣ್ಯದ ಮೇಲೆ ಅಥವಾ ವೀಳ್ಯದೆಲೆ ಮೇಲೆ ಅಡಿಕೆಯನ್ನಿಡಬೇಕು.

*ಶಾಸ್ತ್ರದ ಪ್ರಕಾರ ದೀಪವನ್ನು ನೇರವಾಗಿ ನೆಲದ ಮೇಲಿಡಬಾರದು. ದೀಪದ ಕೆಳಗೆ ಸ್ವಲ್ಪ ಉಪ್ಪು ಅಥವಾ ಮರದ ಹಲಗೆಯನ್ನಿಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಖ-ಸಮೃದ್ಧಿಯ ಅಧಿಪತಿಯಾದ ಶುಕ್ರನ ಕೃಪೆ ನಿಮ್ಮ ಮೇಲೆ ಇರಬೇಕೆಂದರೆ ಹೀಗೆ ಮಾಡಿ