Publish Date: Sun, 04 Nov 2018 (12:59 IST)
Updated Date: Sun, 04 Nov 2018 (13:01 IST)
ಬೆಂಗಳೂರು : ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕಾರ್ಯಕ್ರಮವೊಂದರ ಪ್ರಯುಕ್ತ ಬೇಂಗಳೂರಿಗೆ ಆಗಮಿಸಿದಾಗ ಗಲಾಟೆ ಗದ್ದಲಗಳು ನಡೆದಿವೆ ಎಂಬುದಾಗಿ ತಿಳಿದುಬಂದಿದೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ದಿ ಟೈಮ್ ಕ್ರಿಯೇಶನ್ ವತಿಯಿಂದ ಹಮ್ಮಿಕೊಂಡಿರುವ ಪ್ಯೂಷನ್ ನೈಟ್ ಕಾರ್ಯಕ್ರಮಕ್ಕೆ ವಿರೋಧಗಳ ನಡುವೆಯೂ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ. ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರೂ ಕೂಡ ನಟಿ ಸನ್ನಿ ಲಿಯೋನ್ ಅವರು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕಿಡಿಗೇಡಿ ಅಭಿಮಾನಿಯೊಬ್ಬ ಬಾಟಲಿ ಎಸೆದಿದ್ದಾನೆ.
ಅಲ್ಲದೇ ಕಾರ್ಯಕ್ರಮದ ಬಳಿ ಬ್ಲಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ್ದಾನೆ. ಇದರಿಂದ ಕೆಲಕಾಲ ವಾಗ್ವಾದ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.