Select Your Language

Notifications

webdunia
webdunia
webdunia
webdunia

ಮೀಟೂ ಆರೋಪ; ಇನ್ನೂ ವಿಚಾರಣೆಗೆ ಹಾಜರಾಗದ ನಟಿ ಶೃತಿ ಹರಿಹರನ್

ಮೀಟೂ ಆರೋಪ; ಇನ್ನೂ ವಿಚಾರಣೆಗೆ ಹಾಜರಾಗದ ನಟಿ ಶೃತಿ ಹರಿಹರನ್
ಬೆಂಗಳೂರು , ಶನಿವಾರ, 3 ನವೆಂಬರ್ 2018 (15:00 IST)
ಬೆಂಗಳೂರು : ಅರ್ಜುನ್​ ಸರ್ಜಾ ವಿರುದ್ಧ ದೂರು ನೀಡಿದ್ದ ಶ್ರುತಿ ಹರಿಹರನ್ ಅವರು ಇದೀಗ ಈ ಪ್ರಕರಣದ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.


ಹೌದು. ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ಶ್ರುತಿ ಹರಿಹರನ್ ಈ ಪ್ರಕರಣಕ್ಕೆ ಸಾಕ್ಷಿಗಳಾಗಿ ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್, ನಿರ್ದೇಶಕ ಅರುಣ್ ವೈದ್ಯನಾಥನ್, ಸಹನಿರ್ದೇಶಕಿ ಮೋನಿಕಾ, ಮೇಕಪ್ ಮ್ಯಾನ್ ಕಿರಣ್ ಹಾಗೂ ತನ್ನ ಗೆಳತಿ ಯಶಸ್ವಿನಿ ಅವರನ್ನು ದೂರನಲ್ಲಿ ಉಲ್ಲೇಖಿಸಿದ್ದರು.


ಆದಕಾರಣ ಮೊದಲು ಸಾಕ್ಷಿಗಳ ಹೇಳಿಕೆ ಪಡೆದ ಪೊಲೀಶರು ಶ್ರುತಿ ಹರಿಹರನ್​ಗೆ ಬಂದು ಹೇಳಿಕೆ ನೀಡಲು ತಿಳಿಸಿದ್ದಾರೆ. ಆದರೆ ಶ್ರುತಿ ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಕಾರಣ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.  ಸದ್ಯ ಎರಡನೇ ಬಾರಿ ಶ್ರುತಿ ಹರಿಹರನ್​ಗೆ ನೋಟಿಸ್ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಗಾಯಕಿ, ನಟಿ ವಸುಂಧರಾ ದಾಸ್ ಗೆ ಕಿರುಕುಳ ನೀಡಿದ ಕ್ಯಾಬ್ ಚಾಲಕ