Publish Date: Fri, 02 Nov 2018 (11:31 IST)
Updated Date: Fri, 02 Nov 2018 (11:33 IST)
ಬೆಂಗಳೂರು : ಕ್ಯಾಬ್ ಚಾಲಕನೊಬ್ಬ ಖ್ಯಾತ ಗಾಯಕಿ, ನಟಿ ವಸುಂಧರಾ ದಾಸ್ ಗೆ ಕಿರುಕುಳ ನೀಡಿದ ಘಟನೆ ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಲ್ಲಿ ಅ. 29 ರಂದು ನಡೆದಿದೆ.
ಅಂದು ಸಂಜೆ 4.30 ರ ಸುಮಾರಿಗೆ ಇಟಿಯಾಸ್ ಕಾರು ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್ ನಿಂದ ವಸುಂಧರಾ ದಾಸ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಮಲ್ಲೇಶ್ವರಂ 18 ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನ ಬಾಗಿಲು ತೆರೆಯಲು ಯತ್ನಿಸಿದ ಎಂದು ಆರೋಪಿಸಿ ವಸುಂಧರಾ ದಾಸ್ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐಪಿಸಿ ಸೆಕ್ಸನ್ 509, 341, 354 ಮತ್ತು 504 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ವಸುಂಧರಾ ದಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.