ಧರ್ಮಕ್ಕೆ ಅಪಮಾನ ಮಾಡಿದ ನಟಿ ಸೋಫಿಯಾ ಹಯಾತ್

ಶುಕ್ರವಾರ, 2 ನವೆಂಬರ್ 2018 (07:01 IST)
ಮುಂಬೈ : ಯಾವಾಗಲೂ ವಿವಾದದ ಮೂಲಕವೇ ಸುದ್ಧಿಯಾಗುತ್ತಿರುವ ನಟಿ ಸೋಫಿಯಾ ಹಯಾತ್ ಇದೀಗ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


ಇತ್ತೀಚೆಗಷ್ಟೇ ನಟಿ ಸೋಫಿಯಾ ಹಯಾತ್ ಎಲ್ಲವನ್ನು ತ್ಯಜಿಸಿ ಸನ್ಯಾಸಿಯಾಗಿ ಸುದ್ದಿಯಾಗಿದ್ದರು. ಆದರೆ ಇದೀಗ ಧರ್ಮಕ್ಕೆ ಅಪಮಾನ ಮಾಡಿದ ವಿಚಾರಕ್ಕೆ ಮತ್ತೆ ಸುದ್ಧಿಯಾಗಿದ್ದಾರೆ. ಹೌದು, ಮಾಜಿ ಬಿಗ್​ಬಾಸ್​ ಸ್ಪರ್ಧಿ ಸೋಫಿಯಾ ಇನ್​ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರ ಕಾಲುಗಳು ಮಾತ್ರ ಕಾಣಿಸುತ್ತವೆ. ಆದರೆ, ಅವರ ಅಂಗಾಲಿನಲ್ಲಿ 'ಸ್ವಸ್ತಿಕ್'​​ ಚಿಹ್ನೆಯ ಟ್ಯಾಟೂ ಇದೆ.


 ಒಂದು ಧರ್ಮಕ್ಕೆ ಪವಿತ್ರ ಸಂಕೇತವಾಗಿರುವ ಸ್ವಸ್ತಿಕ್​ನ್ನು ಕಾಲಿನಲ್ಲಿ ಬಿಡಿಸಿಕೊಂಡಿದ್ದಕ್ಕೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಸೋಫಿಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಧರ್ಮದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದರೆ, ಇನ್ನೂ ಕೆಲವರು ಕೆಟ್ಟದಾಗಿ ಕಾಮೆಂಟ್​ಗಳನ್ನು ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟ ಜಗ್ಗೇಶ್ ಪ್ರಕಾರ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಸಿಕೊಡುವುದೇನಂತೆ ಗೊತ್ತಾ