ಕರ್ವಾ ಚೌತ್ ವ್ರತದಲ್ಲಿ ಅನುಷ್ಕಾ ಶರ್ಮಾ ಧರಿಸಿದ ಸೀರೆಯ ಬೆಲೆ ಎಷ್ಟು ಗೊತ್ತಾ?

ಶುಕ್ರವಾರ, 2 ನವೆಂಬರ್ 2018 (06:32 IST)
ಮುಂಬೈ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿಯ ಒಳಿತಿಗಾಗಿ ಆಚರಿಸಿದ ಕರ್ವಾ ಚೌತ್ ವ್ರತಕ್ಕೆ ಧರಿಸಿದ ಸೀರೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಬಾಲಿವುಡ್‌ನ ಬಹುತೇಕ ವಿವಾಹಿತ ಸ್ಟಾರ್‌ ನಟಿಯರು ತಮ್ಮ ಪತಿಯರ ಒಳಿತಿಗಾಗಿ ಕರ್ವಾ ಚೌತ್ ವ್ರತವನ್ನು ಆಚರಿಸಿದ್ದರು. ಆ ಪೈಕಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಡದಿ ನಟಿ ಅನುಷ್ಕಾ ಶರ್ಮಾ ಸಹ ಒಬ್ಬರು. ವ್ರತ ಆಚರಣೆ ಬಳಿಕ ಅನುಷ್ಕಾ, ವಿರಾಟ್ ಜೊತೆ ಸೆಲ್ಫಿ ತೆಗೆಸಿಕೊಂಡು ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.


ಇದರಲ್ಲಿಅನುಷ್ಕಾ ಹಳದಿ ಬಣ್ಣದ ಸೀರೆ ಧರಿಸಿದ್ದರು, ಈ ಸೀರೆ ಬಗ್ಗೆ ಟ್ವೀಟರ್ ನಲ್ಲಿ ಇದೀಗ  ಚರ್ಚೆ ಶುರುವಾಗಿದ್ದು, ಈ ಸೀರೆಯ ಬೆಲೆ ಬರೋಬರಿ 8 ಲಕ್ಷ ರೂಪಾಯಿ ಎನ್ನುವ ಮಾತುಗಳು ಬಾಲಿವುಡ್‌ ಅಂಗಳದಿಂದ ಕೇಳಿಬಂದಿದೆ. ಇದೇ ಕಾರಣಕ್ಕೆ, ಆ ಫೋಟೊವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿರ್ದೇಶಕ ಗುರುಪ್ರಸಾದ್ ಮೇಲೆ ಕಿಡಿಕಾರಿದ ಸಂಗೀತಾ ಭಟ್ ಪತಿ ಸುದರ್ಶನ್