ಬೆಂಗಳೂರು : ಮೀಟೂ ಆರೋಪದ ಬಗ್ಗೆ ಮಾತನಾಡಿದ ನಟಿ ಸಂಗೀತಾ ಭಟ್ ಕುರಿತು ಕೀಳಾಗಿ ಮಾತನಾಡಿದ ನಿರ್ದೇಶಕ ಗುರುಪ್ರಸಾದ್ ಮೇಲೆ ಸಂಗೀತಾ ಭಟ್ ಪತಿ ಸುದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕುಷ್ಕಾ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್ ಅವರು ಎರಡನೇ ಸಲ ಸಿನಿಮಾದ ಬೆನ್ನು ತೋರಿಸುವ ಸೀನ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಕಿಡಿಕಾರಿದ ಸಂಗೀತಾ ಭಟ್ ಪತಿ ಸುದರ್ಶನ್ ,’ಗುರುಪ್ರಸಾದ್ ಯಾವ ಕಾರಣಕ್ಕಾಗಿ 2ನೇ ಸಲ ಚಿತ್ರದ ಸನ್ನಿವೇಷದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘2ನೇ ಚಿತ್ರದಲ್ಲಿ ನಟಿಸಲು ಸಂಗೀತಾ ಗುರುಪ್ರಸಾದ್ ಬಳಿ ಹೋಗಿರಲಿಲ್ಲ. ಅವರೇ ಸಂಗೀತಾರನ್ನು ಚಿತ್ರದಲ್ಲಿ ನಟಿಯಾಗಿ ಆಯ್ಕೆ ಮಾಡಿದ್ದಾರೆ. ಈಗ ಸಂಗೀತಾರ ಚಿತ್ರದ ಸನ್ನವೇಷವನ್ನು ಹೇಳುವ ಮೂಲಕ ಅವರ ಕೀಳು ಮಟ್ಟವನ್ನು ತೋರಿಸಿದ್ದಾರೆ ಎಂದು ಸುದರ್ಶನ್ ದೂಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.