Select Your Language

Notifications

webdunia
webdunia
webdunia
webdunia

ಅಸಿಡಿಟಿಗೆ ಪರಿಹಾರಗಳೇನು?

ಅಸಿಡಿಟಿಗೆ ಪರಿಹಾರಗಳೇನು?
ಬೆಂಗಳೂರು , ಶುಕ್ರವಾರ, 2 ನವೆಂಬರ್ 2018 (16:40 IST)
ಇತ್ತೀಚಿನ ವಿದ್ಯಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅಸಿಡಿಟಿ. ಈ ಅಸಿಡಿಟಿಯು ಮನುಷ್ಯನ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಅನುಭವವಾಗಿರುತ್ತದೆ. ಇದು ಒಂದು ರೀತಿಯ ಖಾಯಿಲೆಯೂ ಅಲ್ಲ, ಒಳ್ಳೆಯ ಆರೋಗ್ಯದ ಸಂಕೇತವೂ ಅಲ್ಲ. ಅಸಿಡಿಟಿಯನ್ನು ನಿರ್ಲಕ್ಷಿಸಲೂಬಾರದು. ಅಸಿಡಿಟಿಗೆ ಕೆಲವು ಮನೆಮದ್ದುಗಳಿವೆ. ಅಂತಹ ಪರಿಹಾರೋಪಾಯಗಳು ಯಾವುವು ಎಂಬುದನ್ನು ನೋಡೋಣ..
* ಜಾಸ್ತಿ ತಂಪು ಪಾನೀಯ ಮತ್ತು ಕೆಫಿನ್‌ಯುಕ್ತ ಪಾನೀಯಗಳನ್ನು ಸೇವಿಸಬಾರದು.
 
* ಅಧಿಕವಾಗಿ ಅಸಿಡಿಟಿಯ ತೊಂದರೆ ಇದ್ದರೆ ಮುಂಜಾನೆಯ ವೇಳೆ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ನಿಂಬೆ ಹಣ್ಣಿನ ರಸ ಬೆರೆಸಿದ ನೀರನ್ನು ಕುಡಿದರೆ ಹೊಟ್ಟೆ ಶುಚಿಯಾಗುವುದಲ್ಲದೇ ಅಧಿಕ ತೂಕವು ನಿಯಂತ್ರಣವಾಗುವುದು.
 
* ಸಮಯಕ್ಕೆ ಸರಿಯಾಗಿ ಸಮ ಪ್ರಮಾಣದಲ್ಲಿ ಊಟ ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* 1 ಚಮಚ ಪುದೀನಾ ರಸಕ್ಕೆ 1/2 ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಎದೆ ಉರಿ ನಿವಾರಣೆಯಾಗುತ್ತದೆ.
 
* 1 ಚಮಚ ಕೊತ್ತಂಬರಿ ಬೀಜವನ್ನು 2 ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ ನಂತರ ಸೋಸಿದ ನೀರನ್ನು ಕುಡಿದರೆ ಅಸಿಡಿಟಿ ಗುಣವಾಗುತ್ತದೆ.
 
* ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಮುಂಜಾನೆಯ ಉಪಾಹಾರವನ್ನು ಕಡ್ಡಾಯವಾಗಿ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ನಿಯಮಿತ ಪ್ರಮಾಣದಲ್ಲಿ ಗುಲ್ಕಂದ್ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಕ್ಷಾರೀಯ ಗುಣವನ್ನು ಹೊಂದಿರುವ ಆಹಾರ ಪದಾರ್ಥಗಳ ಬಳಕೆ ಹೆಚ್ಚು ಮಾಡುವುದು ಅಥವಾ ಆಹಾರದಲ್ಲಿ ಶುಂಠಿಯ ಬಳಕೆಯನ್ನು ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಬೂದುಗುಂಬಳ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅಸಿಡಿಟಿಯು ಗುಣವಾಗುತ್ತದೆ.
 
* ತಣ್ಣಗಿನ ಹಾಲು, ಕೆನೆ ತೆಗೆದ ಹಾಲನ್ನು ಕುಡಿಯುವುದರಿಂದ ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
 
* ಎಳನೀರನ್ನು ಕುಡಿಯುವುದರಿಂದ ಅಸಿಡಿಟಿಯು ಶಮನವಾಗಿ ಜೀರ್ಣಾಂಗವ್ಯೂಹವು ಶಾಂತವಾಗುತ್ತದೆ.
 
* ಬಾದಾಮಿ, ಒಣ ಅಂಜೂರ ಮತ್ತು ಒಣದ್ರಾಕ್ಷಿಯು ಹೊಟ್ಟೆ ಉರಿಯ ಸಂವೇದನೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
 
* ನಿಯಮಿತವಾದ ವಾಯುವಿಹಾರ, ಹಾಲಾಸನ, ಉಷ್ಟ್ರಾಸನ, ವಜ್ರಾಸನ, ಪವನ ಮುಕ್ತಾಸನ ಕಪಾಲಭಾತಿ ಪ್ರಾಣಾಯಾಮ ಇನ್ನೂ ಅನೆಕ ಆಸನಗಳನ್ನು ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಸ್ವಲ್ಪ ಉಪ್ಪು ಹಾಕಿದ ಉಗುರು ಬೆಚ್ಚಗಿನ ನೀರನ್ನು 7-8 ಗ್ಲಾಸ್ ಕುಡಿದು ತುದಿಗಾಲಿನಲ್ಲಿ ಕುಳಿತು ವಾಂತಿ ಮಾಡುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ.
 
* ಪ್ರತಿದಿನ 2 ಚಮಚ ನೆಲ್ಲಿಕಾಯಿ ಪುಡಿಯನ್ನು ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಪುದೀನಾ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ಅದು ಆರಿದ ನಂತರ ಕುಡಿಯುವುದರಿಂದ ಅಸಿಡಿಟಿಯಿಂದ ಮುಕ್ತರಾಗಬಹುದು.
 
* ಬಾಳೆಹಣ್ಣಿನಲ್ಲಿ ನಾರಿನ ಅಂಶವು ಅಧಿಕ ಪ್ರಮಾಣದಲ್ಲಿರುವುದರಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೇ ಅಸಿಡಿಟಿಯು ಮರುಕಳಿಸದಂತೆ ತಡೆದು ಸಹಾಯ ಮಾಡುತ್ತದೆ.
 
* 10 ಗ್ರಾಂ ಒಣದ್ರಾಕ್ಷಿ ಹಾಗೂ 5 ಗ್ರಾಂ ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ಕಲೆಸಿ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಮೊಟ್ಟೆ ಸೇವಿಸುವಾಗ ಅದರ ಹಳದಿ ಭಾಗವನ್ನು ಸೇವಿಸಿದರೆ ಇದು ಅಸಿಡಿಟಿ ರೋಗ ಲಕ್ಷಣವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅದನ್ನು ಸೇವಿಸದೇ ಇರುವುದು ಉತ್ತಮ.
 
* ಲವಂಗವು ಲಾಲಾರಸವನ್ನು ಉತ್ಪತ್ತಿ ಮಾಡುವ ಗುಣವನ್ನು ಹೊಂದಿರುವುದರಿಂದ ಲವಂಗವನ್ನು ಸೇವಿಸುವುದರಿಂದ ಅಸಿಡಿಟಿಯು ಶಮನವಾಗುತ್ತದೆ.
 
* ಬೆಲ್ಲವನ್ನು ನಿಧಾನವಾಗಿ ಚೀಪುತ್ತಾ ಇದ್ದರೆ ಅಸಿಡಿಟಿಯು ಸಂಪೂರ್ಣವಾಗಿ ಶಮನವಾಗುತ್ತದೆ.
 
* ಟೊಮೆಟೊ, ಚಾಕೊಲೇಟ್ ಸೇವನೆಯನ್ನು ಕಡಿಮೆ ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಊಟವಾದ ನಂತರ 5 ರಿಂದ 6 ತುಳಸಿ ಎಲೆಗಳನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರವಿರಬಹುದು.
 
* ಮಾಂಸಾಹಾರವನ್ನು ಸೇವಿಸಿದಾಗ ತಪ್ಪದೇ ಬಿಸಿನೀರನ್ನು ಕುಡಿಯುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ನೆಲ್ಲಿಕಾಯಿಯು ಹಾನಿಗೊಳಗಾದ ಹೊಟ್ಟೆಯ ಪದರ ಮತ್ತು ಅನ್ನನಾಳಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ. 
 
* ಏಲಕ್ಕಿಯ ಸೇವನೆಯಿಂದಲೂ ಜೀರ್ಣಕ್ರಿಯೆಯು ಉತ್ತಮಗೊಂಡು ಹೊಟ್ಟೆಯ ಒಳಪದರವನ್ನು ಶಮನಗೊಳಿಸಿ ಅಧಿಕ ಆಮ್ಲವು ಉತ್ಪತ್ತಿಯಾದ ಪರಿಣಾಮವನ್ನು ಶಾಂತಗೊಳಿಸಲು ನೆರವಾಗುತ್ತದೆ. 
 
* ಶುಂಠಿಯನ್ನು ಜಗಿಯುವುದು ಅಥವಾ ಆಹಾರದಲ್ಲಿ ಶುಂಠಿಯನ್ನು ಬಳಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಸೀಬೆಹಣ್ಣಿನ ಸೇವನೆಯಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಅಸಿಡಿಟಿ ಸಮಸ್ಯೆಯುಂಟಾದಾಗ ಕೆಲವು ಕಾಳು ಸೋಂಪನ್ನು ತೆಗೆದುಕೊಂಡು ಅವುಗಳನ್ನು ನೀರಿನಲ್ಲಿ ನೆನೆಸಿ ಅದರ ನೀರನ್ನು ಸೇವಿಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಮನಸ್ಸನ್ನು ಉಲ್ಲಾಸಭರಿತವಾಗಿ ಇರಿಸಿಕೊಳ್ಳುವುದರಿಂದಲೂ ಅಸಿಡಿಟಿಯು ಶಮನವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಲಕ್ಕಿ ಖಾರ ಪೋಂಗಲ್