Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿತ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ವೃದ್ಧನಿಗೆ ಹಿಗ್ಗಾಮುಗ್ಗಾ ಥಳಿತ
ಚಿಕ್ಕಬಳ್ಳಾಪುರ , ಗುರುವಾರ, 22 ನವೆಂಬರ್ 2018 (15:20 IST)
70 ರ ವೃದ್ಧನೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊನೆಗೆ ಗ್ರಾಮಸ್ಥರಿಂದ ಹಿಗ್ಗಾ ಮುಗ್ಗಾ ಗೂಸಾ ತಿಂದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಕೇನಹಳ್ಳಿ ನಿವಾಸಿ ಗಂಗಾಧರಪ್ಪಗೆ ಗ್ರಾಮಸ್ಥರು ಗೂಸ ತಿನ್ನಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಗ್ರಾಮದ 9 ವರ್ಷದ ಆಪ್ರಾಪ್ತ ಬಾಲಕಿಗೆ ಚಾಕಲೇಟ್ ಹಾಗೂ ಹಣ ನೀಡುವುದಾಗಿ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ಯತ್ತಿದ್ದ ಗಂಗಧಾರಪ್ಪ ಬಾಲಕಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಗಂಗಾಧರಪ್ಪನ ಕೃತ್ಯದಿಂದ ಅಸ್ವಸ್ಥಳಾಗಿದ್ದ ಬಾಲಕಿ ಹೊಟ್ಟೆ ನೋವಿನಿಂದ ನರಳಿದ್ದಾಳೆ.

ಗಂಗಾಧರಪ್ಪ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಬಾಗಿಲನ್ನು ಹಾಕಿಕೊಂಡಿದ್ದನ್ನು ಕಂಡ ಗ್ರಾಮಸ್ಥನೊಬ್ಬನು ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕಾಗಮಿಸಿದ ಬಾಲಕಿಯ ಪೋಷಕರು ಗಂಗಾಧರಪ್ಪನ ಮನೆಗೆ ಪ್ರವೇಶಿಸಿ ನೋಡಿದಾಗ ಮನೆಯಲ್ಲಿ ಬಾಲಕಿ ವಿವಸ್ತ್ರಾಳಾಗಿದ್ದನ್ನು ಕಂಡಿದ್ದಾರೆ. ಆಗ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದೇ ವೇಳೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಗಂಗಾಧರಪ್ಪನನ್ನು ಹಿಡಿದು ಹಿಗ್ಗಾ-ಮಗ್ಗಾ ಥಳಿಸಿ ಮಂಚೆನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಫೇಸ್ ಬುಕ್ ವಾರ್ ನಡೆಸಿದ ಮಾಜಿ ಶಾಸಕರ ಪುತ್ರಿ