Select Your Language

Notifications

webdunia
webdunia
webdunia
webdunia

ಕಾಡಾನೆಗಳ ದಾಳಿಯಿಂದ ಬೆಳೆಗಳು ನಾಶ; ಪರಿಹಾರ ಕೋರಿ ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ ಬಾಲಕಿ

ಕಾಡಾನೆಗಳ ದಾಳಿಯಿಂದ ಬೆಳೆಗಳು ನಾಶ; ಪರಿಹಾರ ಕೋರಿ ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ ಬಾಲಕಿ
ಹಾಸನ , ಗುರುವಾರ, 22 ನವೆಂಬರ್ 2018 (13:06 IST)
ಹಾಸನ : ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆಗಳು ನಾಶವಾಗಿರುವ ಹಿನ್ನಲೆಯಲ್ಲಿ ಇದೀಗ ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಬಾಲಕಿ ಸಿಎಂ ಕುಮಾರಸ್ವಾಮಿಯವರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾಳೆ.


ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಸುತ್ತಮುತ್ತ ಆನೆಗಳ ಹಿಂಡು ಬೀಡುಬಿಟ್ಟಿದೆ. ಅಲ್ಲದೇ ಒಂಟಿಸಲಗವೊಂದು ಹಾಡಹಗಲೇ ಭತ್ತದಗದ್ದೆಯಲ್ಲಿ ಓಡಾಟ ನಡೆಸಿದೆ. ಇದರಿಂದ ಕಾಫಿ, ಭತ್ತ ಸೇರಿದಂತೆ ಇತರೆ ಬೆಳೆಗಳ ನಷ್ಟದೊಂದಿಗೆ ಸ್ಥಳೀಯರು ಜೀವ ಭಯದಲ್ಲಿ ಓಡಾಡುವಂತಾಗಿದೆ.


ಈ ಘಟನೆಯಿಂದ ಬೆಸತ್ತಿರುವ ಹೊಸಗದ್ದೆ ಗ್ರಾಮದ ವಿಸ್ಮಯ ಎಂಬ ಬಾಲಕಿಯು , ಕುಮಾಸ್ವಾಮಿ ಅವರ ಕುರಿತು, “ನಮಸ್ತೆ. ನನ್ನ ಹೆಸರು ವಿಸ್ಮಯ. ನಾನು ಹೊಸಗದ್ದೆ ಗ್ರಾಮದ ನಿವಾಸಿ. ಆನೆಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ದಾಳಿಯಿಂದಾಗಿ ಸಕಲೇಶಪುರ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಬೆಳೆ ನಷ್ಟವಾಗಿದೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಗಳು ಪರಿಹಾರ ಕೊಡಬೇಕೆಂದು ಕೇಳಿಕೊಳ್ಳುತ್ತೇನೆಂದು ವಿಡಿಯೋ ಮೂಲಕ ತಿಳಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಮುಂದೆ ಇನ್ ಕಮಿಂಗ್ ಕಾಲ್ ಸ್ವೀಕರಿಸಲು ರಿಚಾರ್ಜ್ ಮಾಡಲೇಬೇಕಂತೆ