Publish Date: Wed, 28 Nov 2018 (08:50 IST)
Updated Date: Wed, 28 Nov 2018 (08:51 IST)
ಬೆಂಗಳೂರು: ಮದುವೆಯಾಗುವ ಹುಡುಗಿ ತೆಳ್ಳಗೆ ಬೆಳ್ಳಗೆ ಇರಬೇಕೆಂದು ಆಶಿಸುತ್ತೀರಾ? ಹಾಗಿದ್ದರೆ ನಿಮ್ಮ ಆಸೆ ಬಿಡಿ. ಬದಲಾಗಿ ದಪ್ಪಗೆ, ಗುಂಡು ಗುಂಡಗಿನ ಹುಡುಗಿಯನ್ನು ಮನ ಮೆಚ್ಚಿ ಮದುವೆಯಾಗಿ.
ಅದಕ್ಕೆ ಕಾರಣ ಗುಂಡ ಗುಂಡಗಿನ ಗುಂಡಮ್ಮನಂತಹಾ ಹುಡುಗಿಯನ್ನು ಮದುವೆಯಾದ ಪುರುಷರು ಹೆಚ್ಚು ಖುಷಿಯಾಗಿರುತ್ತಾರಂತೆ. ಹಾಗಂತ ಮೆಕ್ಸಿಕೋದ ವಿವಿಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ!
ತೆಳ್ಳಗಿನ ಹುಡುಗಿಯರನ್ನು ಮದುವೆಯಾದ ಪುರುಷರಿಗೆ ಹೋಲಿಸಿದರೆ ಗುಂಡು ಗುಂಡಾಗಿರುವ ಹುಡುಗಿಯನ್ನು ಮದುವೆಯಾದ ಪುರುಷರು ಹೆಚ್ಚು ಖುಷಿಯಾಗಿ, ನಗು ನಗುತ್ತಾ ಇರುತ್ತಾರೆ. ಸಂಗಾತಿಯ ದೇಹ ಗಾತ್ರಕ್ಕೂ ವೈವಾಹಿಕ ಜೀವನದ ಸಂತೋಷಕ್ಕೂ ಪರಸ್ಪರ ಸಂಬಂಧವಿದೆ ಎಂದು ಸಮೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.