ಶ್ರಾವಣ ಮಾಸದಲ್ಲಿ ಮಹಿಳೆಯರು ಈ ಬಣ್ಣದ ಬಟ್ಟೆ ಧರಿಸಿದರೆ ಸುಮಂಗಲಿಯಾಗಿರ್ತಾರಂತೆ

ಮಂಗಳವಾರ, 27 ನವೆಂಬರ್ 2018 (12:16 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ಎಲ್ಲಾ ಕಡೆ ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ಶ್ರಾವಣ ಮಾಸದ ಒಂದು ತಿಂಗಳು ಬಹುತೇಕ ಜನರು ಸಾಮಾನ್ಯವಾಗಿ ಹಸಿರು ಬಣ್ಣದ ಬಟ್ಟೆ ಧರಿಸುತ್ತಾರೆ. ಇದಕ್ಕೆ ಕಾರಣವಿದೆ.


ಶಿವನ ಪತ್ನಿ ಪಾರ್ವತಿಯನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಶ್ರಾವಣ ಮಾಸದಲ್ಲಿ ಹಸಿರು ಬಳೆ ಹಾಗೂ ಹಸಿರು ಬಟ್ಟೆ ಧರಿಸಿ ಶಿವನ ಪೂಜೆ ಮಾಡಿದರೆ ಶಿವ ಕೃಪೆಗೆ ಪಾರ್ತರಾಗುತ್ತಾರಂತೆ. ಇದರಿಂದ ಅವರು ಸುಮಂಗಲಿಯಾಗಿರ್ತಾರೆಂದು ಶಾಸ್ತ್ರ ಹೇಳುತ್ತದೆ.


ಹಸಿರು ಬುಧ ಗ್ರಹದ ಪ್ರತೀಕ. ಬುಧ ಗ್ರಹ ವೃತ್ತಿ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ್ದು. ಶ್ರಾವಣ ಮಾಸದಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸುವುದರಿಂದ ಬುಧ ಪ್ರಸನ್ನನಾಗ್ತಾನೆ. ಸಂಪತ್ತು, ಧನ, ಧಾನ್ಯವನ್ನು ನೀಡ್ತಾನೆ ಎಂದು ನಂಬಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲಕ್ಷ್ಮೀ ಪೂಜೆಯ ನಂತರ ಹೀಗೆ ಮಾಡಿದರೆ ಧನಾಭಿವೃದ್ಧಿಯಾಗುವುದು ಖಂಡಿತ