Publish Date: Tue, 27 Nov 2018 (07:36 IST)
Updated Date: Tue, 27 Nov 2018 (07:38 IST)
ಬೆಂಗಳೂರು : ಸ್ಯಾಂಡಲ್‍ವುಡ್ ನ ‘ದಿಲ್‍ವಾಲಾ’ ಚಿತ್ರದ ನಟ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.
ಹೌದು. ವಿಶೇಷವೆಂದರೆ ಸ್ಯಾಂಡಲ್‍ವುಡ್ ಮತ್ತೊಬ್ಬ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಮದುವೆಯಾಗಲಿರುವ ಡಿಸೆಂಬರ್ 12ರಂದೇ ನಟ ಸುಮಂತ್ ಶೈಲೇಂದ್ರ ಕೂಡ ಹಸೆಮಣೆ ಏರಲಿದ್ದಾರಂತೆ.
ನಟ ಸುಮಂತ್ ಶೈಲೇಂದ್ರ ಅವರು ಅನಿತಾ ಎಂಬುವವರ ಜೊತೆ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 11ರಂದು ಬೆಂಗಳೂರು ಪ್ಯಾಲೇಸ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸದ್ಯ ಸುಮಂತ್ ಅವರು ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.
‘ಆಟ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗನಾದ ಸುಮಂತ್, ಆ ನಂತರ ರಾಧಿಕಾ ಪಂಡಿತ್ ಅವರ ಜೊತೆ ‘ದಿಲ್‍ವಾಲಾ’ ಹಾಗೂ ಕೃತಿ ಕರಬಂಧ ಜೊತೆ ‘ತಿರುಪತಿ ಎಕ್ಸಪ್ರೆಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.