Select Your Language

Notifications

webdunia
webdunia
webdunia
webdunia

ಅಂಬರೀಶ್ ಅಂತಿಮ ದರ್ಶನಕ್ಕೆ ನಟಿ ರಮ್ಯಾ ಬಾರದೇ ಇರಲು ಕಾರಣವೇನು ಗೊತ್ತಾ?

ಬೆಂಗಳೂರು
ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಅಂತಿಮ ದರ್ಶನ ಪಡೆಯಲು ಮಾಜಿ ಸಂಸದೆ, ನಟಿ ರಮ್ಯಾ ಬಾರದೇ ಇರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವಿರೋಧ ವ್ಯಕ್ತವಾಗಿದೆ. ಆದರೆ ಇದೀಗ ನಟಿ ರಮ್ಯಾ ತಾವು ಗೈರು ಹಾಜರಾಗಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ.


ಅಂಬಿ ಅಂತಿಮ ದರ್ಶನ ಪಡೆಯಲು ದೂರದೂರಿನಿಂದ ಸಾವಿರಾರು ಅಭಿಮಾನಿಗಳು, ಆಪ್ತರು, ಗಣ್ಯರು ಎಲ್ಲರೂ ಬಂದಿದ್ದರು. ಆದರೆ ಅಂಬರೀಶ್ ಅವರಿಂದ ಸಂಸದೆ ಪಟ್ಟ ಪಡೆದುಕೊಂಡ ನಟಿ ರಮ್ಯ ಮಾತ್ರ ಬಂದಿರಲಿಲ್ಲ. ಇದಕ್ಕೆ ಜನರಿಂದ ಬಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ರಮ್ಯಾ ಅವರು ತಾವು ಅಪರೂಪದ ಖಾಯಿಲೆಯಿಂದ ಬಳಲುತ್ತಿರುವುದಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ರಮ್ಯಾ ಆಸ್ಟಿಯೋಕ್ಲ್ಯಾಸ್ಟೋಮಾ ಎಂಬ ಮೂಳೆಗಳಿಗೆ ಸಂಬಂಧಿಸಿದಂತೆ ಖಾಯಿಲೆಗೆ ತುತ್ತಾಗಿದ್ದಾರಂತೆ. ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಈ ರೋಗ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಂತೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಕ್ಯಾನ್ಸರ್ ಬರುವ ಸಾಧ್ಯತೆಯಿತ್ತು ಎಂದು ಬರೆದುಕೊಂಡಿರುವ ರಮ್ಯಾ ಕಾಲಿಗೆ ಬ್ಯಾಂಡೆಜ್ ಹಾಕಿಕೊಂಡ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಿದ್ದರು ಎಂದ ಯೋಗಿ ಆದಿತ್ಯನಾಥ್