Select Your Language

Notifications

webdunia
webdunia
webdunia
Wednesday, 9 April 2025
webdunia

ನವೆಂಬರ್ ತಿಂಗಳ ಬಗ್ಗೆ ಸಿಎಂ ಹೇಳಿದ್ದೇನು ಗೊತ್ತಾ?

ಸಿಎಂ
ಮಂಡ್ಯ , ಸೋಮವಾರ, 26 ನವೆಂಬರ್ 2018 (16:45 IST)
ನಟ ಅಂಬರೀಶ್ ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ಎಚ್ಚರಿಕೆ ಕೊಡುತ್ತಿದ್ದರು. ಹುಷಾರು ಕಣೋ. ನಿನ್ನ ಸೇವೆ ಸಮಾಜಕ್ಕೆ ಬೇಕು ಎಂದು ಕರೆ ಮಾಡಿದ್ದರು ಎಂದು ಸಿಎಂ ಕುಮಾರಸ್ವಾಮಿ ಸ್ಮರಿಸಿದ್ದಾರೆ. ಅಂದ್ಹಾಗೆ ನವೆಂಬರ್ ತಿಂಗಳ ಬಗ್ಗೆಯೂ ಸಿಎಂ ಹೇಳಿದ್ದಾರೆ.

ಸರ್ಕಾರಕ್ಕೆ ಮಂಡ್ಯದಲ್ಲಿ ಅಂಬರೀಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದು ಸವಾಲಾಗಿತ್ತು. ಹಲವಾರು ಸಮಸ್ಯೆಗಳಿದ್ದರೂ ಸುಸೂತ್ರವಾಗಿ ಆಗಿದೆ. ಅಂಬಿ ಅವರ ಸ್ವಚ್ಚ ಮನಸ್ಸಿನಿಂದ ಅವರ ಅಂತ್ಯ ಕಾಲದಲ್ಲೂ ಸುಗಮವಾದ ರೀತಿ ಕಾರ್ಯ ನಡೆಯುತ್ತಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹೇಳಿಕೆ ನೀಡಿರುವ ಅವರು, ಅಂಬರೀಶ್ ಕಲಾವಿದರಾಗಿ ಜೀವನ ಆರಂಭ ಮಾಡಿದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದರು.   

ಎಳನೀರು ಮಾರುತ್ತಿದ್ದ ಅಂಬಿ ಅಭಿಮಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನೋವಿನ ಸಂಗತಿ.
ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ಅಂಬರೀಶ್ ಎಚ್ಚರಿಕೆ ಕೊಡುತ್ತಿದ್ದರು. ಹುಷಾರು ಕಣೋ. ನಿನ್ನ ಸೇವೆ ಸಮಾಜಕ್ಕೆ ಬೇಕು ಎಂದು ಕರೆ ಮಾಡಿದ್ದರು. ನನಗಿಂತ ಎಂಟು ವರ್ಷ ದೊಡ್ಡವರು. ಅಣ್ಣನ ರೀತಿ ಇದ್ದರು ಎಂದರು.  

ವಿಶೇಷವಾಗಿ ಅಂಬರೀಶ್ ನನಗೆ ಆತ್ಮೀಯ ಸ್ನೇಹಿತ.  ನವೆಂಬರ್ ತಿಂಗಳು ಅತ್ಯಂತ ನೋವಿನ ದಿನ ನೋಡುತ್ತಿದ್ದೇನೆ. ಎಲ್ಲವೂ ಇಲ್ಲಿಗೆ ನಿಲ್ಲಲಿ ಎಂದು ಸಿಎಂ ಭಾವುಕರಾಗಿ ನುಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಲೂನ್ ಜಾತ್ರೆಯಲ್ಲಿ ಮುಗಿಲುಮುಟ್ಟಿದ ಸಂಭ್ರಮ