ಆ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಭ್ರಮದಿಂದ ಪೂಜೆಗಳು ನಡೆದವು. ಯಾಕೆ ಎನ್ನೋದಕ್ಕೆ ಮುಂದೆ ಓದಿ…
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಭ್ರಮದಿಂದ ಸಾಮೂಹಿಕ ರುದ್ರಾಭೀಷಕ ಮತ್ತು ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಿತು.
ರೇವಣಸಿದ್ದಯ್ಯ ಹಿರೇಮಠ, ಜಗದೀಶ್ ಸ್ವಾಮಿ ಕಾನಕುರ್ತಿ, ಸಂಗಯ್ಯ ಸ್ವಾಮಿ ಅವರಿಂದ ಸಂಗೀತಯುಕ್ತ ರುದ್ರಾಭಿಷೇಕ ನಡೆಸಿಕೊಟ್ಟರು. 21 ಜೋಡಿ ದಂಪತಿಗಳು ಸಾಮೂಹಿಕ ರುದ್ರಾಭೀಷಕದಲ್ಲಿ ಭಾಗಿಯಾದರು. ನಂತರ ಹಾಲಪ್ಪಯನ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಮಹಿಳೆಯರು ದೀಪವನ್ನು ಹಚ್ಚಿ ಸಂಭ್ರಮ ಪಟ್ಟರು.