Publish Date: Sun, 28 Apr 2019 (15:48 IST)
Updated Date: Sun, 28 Apr 2019 (15:52 IST)
ಟಾಟಾ ಸುಮೋ ಒಂದರಲ್ಲಿ ಬಂದಿದ್ದ ನಾಲ್ಕು ಜನ ವ್ಯಕ್ತಿಗಳು ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಲ ಗ್ರಾಮದ ಹತ್ತಿರ ಮಹಾರಾಷ್ಟ್ರ ಮೂಲದ ಟಾಟಾ ಸುಮೋ ಒಂದರಲ್ಲಿ ಬಂದ ನಾಲ್ಕು ಜನ ವ್ಯಕ್ತಿಗಳು ಯುವಕನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ಥಳಿಸುತ್ತಿದ್ದ ಘಟನೆ ನಡೆದಿದೆ.
MH -22-D-2162 ಸುಮೋ ವಾಹನದಲ್ಲಿ ಬಂದ ವ್ಯಕ್ತಿಗಳು ಮರಾಠಿ ಭಾಷಿಕರಾಗಿದ್ದು, ಯುವಕನ್ನು ಬೆನ್ನಟ್ಟಿ ಹಿಡಿದು "ದುಡ್ಡು ಕೊಡದೇ ತಪ್ಪಿಸಿಕೊಂಡು ಬಂದಿದೀಯಾ" ಎಂದು ಮರಾಠಿಯಲ್ಲಿ ಮಾತನಾಡುತ್ತಿದ್ದರು. "ಅಣ್ಣಾ ಹೇಳ್ರಿ ಅಣ್ಣಾ ಹೇಳ್ರಿ" ಎಂದು ಯುವಕ ಅಲ್ಲಿದ್ದವರಿಗೆ ಗೋಗರಿಯುತ್ತಿದರೆ "ಒಂದು ಲಕ್ಷ ಇಪ್ಪತ್ತು ಸಾವಿರ ಹಣ ತಗೋಂಡ ಬಂದಾನ" ಎನ್ನುವ ಮಾತು ಕೇಳಿ ಬಂದವು.
ಹಳ್ಯಾಲ ಗ್ರಾಮದ ಯುವಕ ಮಹಾರಾಷ್ಟ್ರದಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದನು. ಒಂದು ಲಕ್ಷ ಇಪ್ಪತ್ತು ಸಾವಿರ ಮುಂಗಡ ಪಡೆದು ಕೆಲಸ ಮಾಡದೆ ಎಸ್ಕೇಪ್ ಆಗಿ ಬಂದಿದ್ದನು ಎನ್ನಲಾಗಿದೆ.