ಹೆಚ್ಚಿನ ಬಡ್ಡಿ ಆಮಿಷ: ದುಡ್ಡು ಕೊಟ್ಟ ಜನರಿಗೆ ಮಕ್ಮಲ್ ಟೋಪಿ

ಗುರುವಾರ, 25 ಏಪ್ರಿಲ್ 2019 (14:47 IST)
ಹೆಚ್ಚಿನ ಬಡ್ಡಿ ಹಣ ನೀಡುವುದಾಗಿ ಹೇಳಿ ಗ್ರಾಹಕರಿಗೆ ವಂಚನೆ ಮಾಡಿರುವ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.

ಚಿತ್ರದುರ್ಗದಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ಬಡ್ಡಿ ಹಣ ನೀಡುವುದಾಗಿ ಬ್ಯಾಂಕ್ ವೊಂದು ಜನರಿಗೆ ಮಕ್ಮಲ್ ಟೋಪಿ ಹಾಕಿದೆ.

ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ಪರಾರಿಯಾಗಿದ್ದಾರೆ. ಚಿತ್ರದುರ್ಗದ ಗ್ರೇಟ್ ಫೋರ್ಟ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ ಗ್ರಾಹಕರಿಗೆ ಮೋಸ ಮಾಡಲಾಗಿದೆ.

ಅಂದಾಜು 8 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಪರಾರಿಯಾಗಿದ್ದಾರೆ. ಪಿಗ್ಮಿ ರೂಪದಲ್ಲಿ  ಹಣ ಸಂಗ್ರಹಿಸಿ ಮೋಸ ಮಾಡಲಾಗಿದೆ. ಅವಧಿ ಮುಗಿದರೂ ಪಿಗ್ಮಿ ಹಣ ವಾಪಸ್ ನೀಡಲು ಬ್ಯಾಂಕಿನವರು ನಿರಾಕರಿಸಿದ್ದಾರೆ.

ಹೀಗಾಗಿ ಹಣ ವಾಪಸ್ ಕೊಡಿಸುವಂತೆ  ಪೊಲೀಸರ ಮೊರೆ ಹೋಗಿದ್ದಾರೆ ಗ್ರಾಹಕರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೈ ಪಡೆ ವಿರುದ್ಧ ಲಿಂಗಾಯಿತರಲ್ಲಿ ಭುಗಿಲೆದ್ದ ಆಕ್ರೋಶ