Select Your Language

Notifications

webdunia
webdunia
webdunia
webdunia

ಪ್ರತಿ ಮತ ಖರೀದಿಗೆ 2500 ರೂ.ಗಳ ವರೆಗೆ ಖರ್ಚು ಮಾಡಲಾಗಿದೆ- ಶಾಕಿಂಗ್ ನ್ಯೂಸ್ ಬಾಯ್ಬಿಟ್ಟ ಟಿಡಿಪಿ ಸಂಸದ

ಪ್ರತಿ ಮತ ಖರೀದಿಗೆ 2500 ರೂ.ಗಳ ವರೆಗೆ ಖರ್ಚು ಮಾಡಲಾಗಿದೆ- ಶಾಕಿಂಗ್ ನ್ಯೂಸ್ ಬಾಯ್ಬಿಟ್ಟ ಟಿಡಿಪಿ ಸಂಸದ
ಆಂಧ್ರಪ್ರದೇಶ , ಮಂಗಳವಾರ, 23 ಏಪ್ರಿಲ್ 2019 (10:23 IST)
ಆಂಧ್ರಪ್ರದೇಶ : ತೆಲುಗು ದೇಶಂ ಪಾರ್ಟಿಯ ಸಂಸದ ಜೆ.ಸಿ. ದಿವಾಕರ ರೆಡ್ಡಿ, ಇದೀಗ ಆಂಧ್ರ ಪ್ರದೇಶದ ಚುನಾವಣೆ ಕುರಿತಂತೆ ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.


ಭಾರತದಲ್ಲಿ ಚುನಾವಣೆ ನಡೆಯುವ ಈ ವೇಳೆ ಮತದಾರರಿಗೆ ಹಣ ಹಾಗೂ ಮದ್ಯದ ಆಮಿಷ ಒಡ್ಡಿ ಮತದಾರರ ದಾರಿ ತಪ್ಪಿಸಬಾರದೆಂದು ಅಧಿಕಾರಿಗಳು  ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟಿದ್ದರೂ ಕೂಡ ಕೆಲವೆಡೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮತದಾರರಿಗೆ ಹಣ, ಮದ್ಯ ಹಂಚಲಾಗಿದೆ.


ಈ ನಡುವೆ ಇದೀಗ ಸಂಸದ ಜೆ.ಸಿ. ದಿವಾಕರ ರೆಡ್ಡಿ ಅವರು, ಇತ್ತೀಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಸೇರಿದಂತೆ ಎಲ್ಲ ಪಕ್ಷಗಳು 10,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವೆಚ್ಚ ಮಾಡಿವೆ. ಪ್ರತಿ ಮತ ಖರೀದಿಗೆ 2500 ರೂ.ಗಳ ವರೆಗೆ ಖರ್ಚು ಮಾಡಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಒಂದು ಮತಕ್ಕೆ ಐದು ಸಾವಿರ ರೂ.ಗಳವರೆಗೆ ಮತದಾರರಿಗೆ ನೀಡಲಾಗಿದೆ. ಇದಕ್ಕೆಲ್ಲ ಬಳಕೆಯಾಗಿರುವುದು ಭ್ರಷ್ಟಾಚಾರದಿಂದ ಗಳಿಸಿದ ಹಣ ಎಂದು ಬೆಚ್ಚಿ ಬೀಳಿಸುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಐಡಿ ಕಾರ್ಡ್ ಕೇಳಿದ ಸಿಬ್ಬಂದಿಗಳ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ