ಕಾಂಗ್ರೆಸ್ ನ ನವಜೋತ್ ಸಿಂಗ್ ಸಿಧು ಇನ್ನು 72 ಗಂಟೆ ಚುನಾವಣೆ ಪ್ರಚಾರ ಮಾಡುವಂತಿಲ್ಲ!

ಮಂಗಳವಾರ, 23 ಏಪ್ರಿಲ್ 2019 (08:56 IST)
ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ನಿಷೇಧ ವಿಧಿಸಲಾಗಿದೆ.


ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕೆ ಚುನಾವಣಾ ಆಯೋಗ ಸಿಧುಗೆ ಈ ನಿಷೇಧ ಶಿಕ್ಷೆ ನೀಡಿದೆ. ಬಿಹಾರಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ತಪ್ಪಿಗೆ ಸಿಧುಗೆ ಈ ಶಿಕ್ಷೆ ನೀಡಲಾಗಿದೆ.

ಅದರಂತೆ 72 ಗಂಟೆಗಳ ಕಾಲ ನವಜೋತ್ ಸಿಂಗ್ ಯಾವುದೇ ಚುನಾವಣಾ ರ್ಯಾಲಿ, ಸಭೆ, ಭಾಷಣ ಮಾಡುವಂತಿಲ್ಲ. ಯಾವುದೇ ಕೋಮು, ಧರ್ಮ ಭಾವನೆ ಕೆರಳಿಸುವಂತಹ ಭಾಷಣ ಮಾಡಿದರೆ ಚುನಾವಣಾ ಆಯೋಗ ತಕ್ಕ ಶಿಕ್ಷೆ ನೀಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ ಚಲಾಯಿಸಿದ ಬಳಿಕ ಪತ್ರಕರ್ತರಿಗೆ ಪ್ರಧಾನಿ ಮೋದಿ ಹೇಳಿದ ಕಿವಿ ಮಾತೇನು ಗೊತ್ತಾ?