Publish Date: Tue, 23 Apr 2019 (07:39 IST)
Updated Date: Tue, 23 Apr 2019 (07:42 IST)
ಕೊಚ್ಚಿ: ಕೇರಳದ ತ್ರಿಶ್ಶೂರ್ ನಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಲಯಾಳಂ ಸ್ಟಾರ್ ನಟ ಸುರೇಶ್ ಗೋಪಿ ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಕೇರಳದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಸುರೇಶ್ ಗೋಪಿ ಚುನಾವಣಾ ಕಣಕ್ಕಿಳಿದಿದ್ದಾರೆ. ಪ್ರಧಾನಿ ಮೋದಿಯಿಂದ ಪ್ರಭಾವಿತರಾಗಿ ಅವರು ರಾಜಕೀಯಕ್ಕೆ ಬಂದಿದ್ದರು.
ಇದೀಗ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನು ಭೇಟಿಯಾಗಿರುವ ಸುರೇಶ್ ಗೋಪಿ ನಾವಿಬ್ಬರೂ ಹಲವು ವರ್ಷಗಳಿಂದಲೂ ಸ್ನೇಹಿತರು. ನಮ್ಮಿಬ್ಬರ ಸ್ನೇಹ ಗಾಢವಾದುದು. ಹೀಗಾಗಿಯೇ ಮತದಾನಕ್ಕೆ ಮೊದಲು ಮೋಹನ್ ಲಾಲ್ ಭೇಟಿಯಾಗಿ ನನ್ನ ಸಹೋದರನಂತಿರುವ ಅವರ ಆಶೀರ್ವಾದ ಪಡೆದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ