Publish Date: Tue, 23 Apr 2019 (08:31 IST)
Updated Date: Tue, 23 Apr 2019 (08:36 IST)
ಅಹಮ್ಮದಾಬಾದ್: ಲೋಕಸಭೆ ಚುನಾವಣೆ 2019 ರ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಪ್ರಧಾನಿ ಮೋದಿ ಮತ ಚಲಾಯಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜತೆಗೆ ಬಿಗಿ ಭದ್ರತೆಯಲ್ಲಿ ಮತಗಟ್ಟೆಗೆ ಬಂದ ಪ್ರಧಾನಿ ಮೋದಿ ರಾನಿಪ್ ನಲ್ಲಿ ಮತ ಹಾಕಿದ್ದಾರೆ. ಬಳಿಕ ಶಾಯಿ ಗುರುತಿನ ತೋರುಬೆರಳನ್ನು ಜನರತ್ತ ತೋರಿ ತಾನು ಮತ ಚಲಾಯಿಸಿದೆನೆಂದು ಸಾರಿದ್ದಾರೆ. ಈ ಸಂದರ್ಭದಲ್ಲಿ ಬೆಂಬಲಿಗರ ಹರ್ಷೋದ್ಘಾರ ಜೋರಾಗಿತ್ತು.
ಮತ ಚಲಾಯಿಸುವ ಮೊದಲು ಗಾಂಧಿನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ತಾಯಿಯ ಆಶೀರ್ವಾದ ಪಡೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ