ಮತ ಚಲಾಯಿಸಿದ ಬಳಿಕ ಪತ್ರಕರ್ತರಿಗೆ ಪ್ರಧಾನಿ ಮೋದಿ ಹೇಳಿದ ಕಿವಿ ಮಾತೇನು ಗೊತ್ತಾ?

ಮಂಗಳವಾರ, 23 ಏಪ್ರಿಲ್ 2019 (08:44 IST)
ಅಹಮ್ಮದಾಬಾದ್: ಇಲ್ಲಿನ ರಾನಿಪ್ ಕ್ಷೇತ್ರದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಎಲ್ಲರೂ ವಿವೇಚನೆಯಿಂದ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ.


ಬಳಿಕ ಪತ್ರಕರ್ತರಿಗೆ ವಿಶೇಷ ಕಿವಿ ಮಾತು ಹೇಳಿದ ಪ್ರಧಾನಿ ಮೋದಿ ಕಳೆದ ಎರಡೂವರೆ ತಿಂಗಳಿನಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಉರಿಬಿಸಿಲನ್ನೂ ಲೆಕ್ಕಿಸದೇ ವಿಶ್ರಾಂತಿಯಿಲ್ಲದೇ ದುಡಿದು ದಣಿದಿರುತ್ತೀರಿ.

ಇನ್ನಾದರೂ ಕೆಲವು ದಿನ ರೆಸ್ಟ್ ಮಾಡಿ. ಮಕ್ಕಳೊಂದಿಗೆ ರಜೆಯ ಖುಷಿ ಅನುಭವಿಸಿ ಎಂದು ಕಿವಿ ಮಾತು ಹೇಳಿದ್ದಾರೆ. ಅಷ್ಟೇ ಅಲ್ಲ, ಮೋದಿ ಮತ ಚಲಾಯಿಸಲು ಬಂದಾಗ ನೆರೆದಿದ್ದ ಅಪಾರ ಜನಸ್ತೋಮ ನೋಡಿ ನನಗೆ ಇಲ್ಲಿನ ಜನ ಸಮೂಹವನ್ನು ನೋಡುತ್ತಿದ್ದರೆ ಕುಂಭ ಮೇಳ ನೆನಪಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಮಿತ್ ಶಾ ಜತೆಗೆ ಬಂದು ಮತ ಚಲಾಯಿಸಿದ ಪ್ರಧಾನಿ ಮೋದಿ